ಸಿನಿಮಾಗಳಿಗಿಂತ ಹಾಟ್ ದೃಶ್ಯಗಳು, ವಿವಾದಾತ್ಮಕ ಹೇಳಿಕೆಗಳಿಂದ ಹೆಚ್ಚಾಗಿ ಗುರುತಿಸಿಕೊಂಡ ಬೆಡಗಿ ರಾಧಿಕಾ ಆಪ್ಟೆ. ಈ ನಡುವೆ ಬಾಲಿವುಡ್ ಸೇರಿದಂತೆ ಚಿತ್ರರಂಗದಲ್ಲಿ ಸಾಕಷ್ಟು ಬಿಜಿಯಾಗಿರುವ ತಾರೆ. ಪ್ರತಿಭಾವಂತ ನಟಿ ಎನ್ನಿಸಿಕೊಂಡಿರುವ ಈಕೆಯನ್ನು ಇತ್ತೀಚೆಗೆ ಕೆಲವರು ತಮ್ಮ ಚಿತ್ರಕ್ಕೆ ಈ ಬೆಡಗಿಯೇ ಸೂಕ್ತ ಎಂದು ಆಯ್ಕೆ ಮಾಡುತ್ತಿದ್ದಾರೆ. ಇತ್ತೀಚೆಗೆ ಆರ್ ಬಲ್ಕಿ ನಿರ್ದೇಶನದಲ್ಲಿ ಮೂಡಿಬರುತ್ತಿರುವ ಚಿತ್ರದಲ್ಲಿ ರಾಧಿಕಾರನ್ನು ಆಯ್ಕೆ ಮಾಡಲಾಗಿದೆ. ಮಹಿಳೆಯರಿಗಾಗಿ ಕಡಿಮೆ ಬೆಲೆಗೆ ನ್ಯಾಪ್ಕಿನ್ ತಯಾರಿಸಿದ ಅರುಣಾಚಲಂ ಮುರುಗನಾಧಂ ಎಂಬುವವರ