ರಂಗಿತರಂಗ ಖ್ಯಾತಿಯ ನಟಿ ರಾಧಿಕಾ ಮತ್ತೆ ಕಾಲೇಜಿಗೆ ತೆರಳಲಿದ್ದಾರೆ. ಅದು ರಿಯಲ್ ಲೈಫಲ್ಲಿ ಅಲ್ಲ, ರೀಲ್ ಲೈಫಲ್ಲಿ ರಾಧಿಕಾ ಚೇತನ್ ಕಾಲೇಜು ಹುಡುಗಿಯಾಗಿ ತೆರೆ ಮೇಲೆ ಬರಲು ರೆಡಿಯಾಗಿದ್ದಾರೆ. ಯೂ ಟರ್ನ್ ಚಿತ್ರದಲ್ಲಿ ಕಾಣಿಸಿಕೊಂಡಿರುವ ರಾಧಿಕಾ ಬಹುದಿನದ ಬಳಿಕ ಮತ್ತೆ ಎಂಟ್ರಿ ನೀಡುತ್ತಿದ್ದಾರೆ. ಮುಂಬರುವ ಚಿತ್ರ ಬಿಬಿ5 ಶೂಟಿಂಗ್ನಲ್ಲಿ ರಾಧಿಕಾ ಪಾಲ್ಗೊಳ್ಳಲಿದ್ದಾರೆ. ತಮ್ಮ ಮುಂಬರುವ ಚಿತ್ರದ ಬಗ್ಗೆ ಹಂಚಿಕೊಂಡಿರುವ ರಾಧಿಕಾ ಚೇತನ್, ನಾನು ಈ ಚಿತ್ರದಲ್ಲಿ ಕಾಲೇಜು ವಿದ್ಯಾರ್ಥಿನಿಯಾಗಿ ನಟಿಸುತ್ತಿದ್ದೇನೆ.