ರಾಜ್ ಕುಂದ್ರಾ ಕೇಸ್: ಬೆದರಿಸಿ ಅಶ್ಲೀಲ ವಿಡಿಯೋ ಮಾಡಲಾಗ್ತಿತ್ತು!

ಮುಂಬೈ| Krishnaveni K| Last Modified ಬುಧವಾರ, 28 ಜುಲೈ 2021 (10:31 IST)
ಮುಂಬೈ: ರಾಜ್ ಕುಂದ್ರಾ ಪೋರ್ನ್ ವಿಡಿಯೋ ಕೇಸ್ ಗೆ ಮತ್ತೊಂದು ಟ್ವಿಸ್ಟ್ ಸಿಕ್ಕಿದೆ. ಇಂತಹ ವಿಡಿಯೋಗಳನ್ನು ನಟಿಸುವಂತೆ ತಮ್ಮನ್ನು ಬಲವಂತ ಮಾಡಿ, ಬೆದರಿಕೆ ಹಾಕಲಾಗುತ್ತಿತ್ತು ಎಂದು ಇಬ್ಬರು ಸಂತ್ರಸ್ತರು ಪೊಲೀಸ್ ವಿಚಾರಣೆ ವೇಳೆ ಬಾಯ್ಬಿಟ್ಟಿದ್ದಾರೆ ಎನ್ನಲಾಗಿದೆ.
Photo Courtesy: Google

 
ಶೂಟಿಂಗ್ ಮಾಡುತ್ತಿದ್ದ ವ್ಯಕ್ತಿ ನಮ್ಮನ್ನು ಇನ್ ಸ್ಟಾಗ್ರಾಂ ಮೂಲಕ ಶೂಟಿಂಗ್ ಗೆ ಕರೆದಿದ್ದ. ಅಡಿಷನ್ ಕೊಡುವ ನೆಪದಲ್ಲಿ ಅಶ್ಲೀಲ ಫೋಟೋ ಶೂಟ್ ಮಾಡಲಾಗುತ್ತಿತ್ತು. ನಾವು ಪ್ರಶ್ನಿಸಿದಾಗ ನಮಗೆ ಬೆದರಿಕೆ ಹಾಕಲಾಗುತ್ತಿತ್ತು. ಅರ್ಧಕ್ಕೇ ಹೊರನಡೆದರೆ ಕಾನೂನು ಕ್ರಮ ಎದುರಿಸಬೇಕಾಗುತ್ತದೆ, ಶೂಟಿಂಗ್ ಖರ್ಚು ಕೊಡಬೇಕಾಗುತ್ತದೆ ಎಂದು ಬೆದರಿಸುತ್ತಿದ್ದರು.
 
ಬಳಿಕ ಪೋರ್ನ್ ವಿಡಿಯೋ ಮಾಡಲಾಗುತ್ತಿತ್ತು. ಈ ವೇಳೆ ವಿಡಿಯೋದಲ್ಲಿ ಅಭಿನಯಿಸಿದ್ದ ನಟ ತಮ್ಮ ಮೇಲೆ ಅತ್ಯಾಚಾರವನ್ನೇ ಮಾಡಿದ್ದ. ಕೊನೆಗೆ ಸಣ್ಣ ಮೊತ್ತದ ವೇತನ ನೀಡಿ ಸಾಗ ಹಾಕುತ್ತಿದ್ದರು. ಈ ವಿಡಿಯೋಗಳನ್ನು ರಾಜ್ ಕುಂದ್ರಾ ಸೇರಿದಂತೆ ಇಂತಹ ಪೋರ್ನ್ ಆಪ್ ಮಾಲಿಕರು ಖರೀದಿ ಮಾಡುತ್ತಿದ್ದರು ಎಂದು ಸಂತ್ರಸ್ತರು ಬಾಯ್ಬಿಟ್ಟಿದ್ದಾರೆ ಎನ್ನಲಾಗಿದೆ.
ಇದರಲ್ಲಿ ಇನ್ನಷ್ಟು ಓದಿ :