ಚೆನ್ನೈ : ಬಿಡುಗಡೆಗೆ ಸಿದ್ಧವಾದ ರಜನೀಕಾಂತ್ ಅಭಿನಯದ 2.0 ಚಿತ್ರಕ್ಕೆ ಸಂಕಷ್ಟವೊಂದು ಎದುರಾಗಿದೆ. ಹೌದು. ರಜನೀಕಾಂತ್ ಅಭಿನಯದ 2.0 ಚಿತ್ರದಿಂದ ಸಮಾಜಕ್ಕೆ ತಪ್ಪು ಮಾಹಿತಿ ರವಾನೆಯಾಗುತ್ತದೆ ಎಂದು ಚಿತ್ರದ ವಿರುದ್ಧ ಸಿ.ಬಿ.ಎಫ್.ಸಿ.ಗೆ ಸೆಲ್ಯೂಲರ್ ಆಪರೇಟರ್ಸ್ ಅಸೋಸಿಯೇಷನ್ ಆಫ್ ಇಂಡಿಯಾ(ಸಿಒಎಐ) ಸಂಸ್ಥೆ ದೂರು ದಾಖಲಿಸಿದೆ. ಚಿತ್ರದಲ್ಲಿ ಪ್ರಾಣಿತಜ್ಞರಾದ ಅಕ್ಷಯ್ ಕುಮಾರ್, ಹಕ್ಕಿಗಳು ಮತ್ತು ಪ್ರಾಣಿಗಳ ಮೇಲೆ ದುಷ್ಪರಿಣಾಮ ಬೀರುವ ವಾತಾವರಣಕ್ಕೆ ಮೊಬೈಲ್ ವಿಕಿರಣಗಳೇ ಕಾರಣ ಎಂದು ಮೊಬೈಲ್ ಬಳಕೆದಾರರನ್ನು ನಿಂದಿಸಿದ್ದಾರೆ