ರಾಖಿ ಸಾವಂತ್ ಆಸ್ಪತ್ರೆಗೆ ದಾಖಲು

ಮುಂಬೈ| navya| Last Modified ಶುಕ್ರವಾರ, 26 ಆಗಸ್ಟ್ 2016 (09:57 IST)
ಸದಾ ಒಂದಿಲ್ಲೊಂದು ವಿವಾದಗಳಿಂದಲೇ ಸುದ್ದಿಯಾಗುತ್ತಿರುವ ನಟಿ ರಾಖಿ ಸಾವಂತ್ ಈ ಬಾರಿ ಹೊಸ ವಿಚಾರವೊಂದಕ್ಕೆ ಸುದ್ದಿಯಾಗಿದ್ದಾರೆ. ರಾಖಿ ಸಾವಂತ್ ಅವರು ಅನಾರೋಗ್ಯದಿಂದ ಬಳಲುತ್ತಿದ್ದ ಸದ್ಯ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಅಷ್ಟಕ್ಕೂ ರಾಖಿ ಸಾವಂತ್ ಅವರಿಗೆ ಆಗಿದ್ದೇನು ಅಂತಾ ಗೊತ್ತಾದ್ರೆ ನೀವು ಅರೆಕ್ಷಣ ಶಾಕ್ ಆಗ್ತೀರಾ.
 
ಮೊನ್ನೆ ಮೊನ್ನೆ ತಾನೇ ರಾಖಿ ಸಾವಂತ್ ಅವರು ಅಮೇರಿಕಾದಲ್ಲಿ ಮೋದಿ ಭಾವಚಿತ್ರವಿರುವ ಬಟ್ಟೆ ಧರಿಸಿ ಒಂದಷ್ಟು ವಿವಾದಕ್ಕೆ ಕಾರಣವಾಗಿದ್ದು ನಿಮಗೆಲ್ಲಾ ಗೊತ್ತೇ ಇದೆ. ಇದೇ ರಾಖಿ ಇದೀಗ ಮತ್ತೆ ಸುದ್ದಿಯಲ್ಲಿದ್ದಾರೆ. ರಾಖಿ ಸಾವಂತ್ ಅವರು ಯೇ ಕಹಾನಿ ಜೂಲಿ ಕಿ ಅನ್ನೋ ಸಿನಿಮಾದಲ್ಲಿ ಅಭಿನಯಿಸುತ್ತಿದ್ದಾರೆ.> > ಅಮೇರಿಕಾಕ್ಕೆ ತೆರಳಿದ್ದ ರಾಖಿ ಸಾವಂತ್ ಅವರು ಮೊನ್ನ ತಾನೇ ಮುಂಬೈಗೆ ವಾಪಸ್ಸಾಗಿದ್ದರು. ಹಾಗೇ ಬರುತ್ತಿದ್ದಂತೆ ರಾಖಿ ಸಾವಂತ್ ಅವರಿಗೆ ಭರ್ಜರಿ ಶಾಕ್ ಒಂದು ಕಾದಿತ್ತು. ಏನಪ್ಪಾ ಅಂದ್ರೆ ರಾಖಿ ಇಲ್ಲದ ವೇಳೆ ಅವರ ಸಿನಿಮಾದ ಆಡಿಯೋ ರಿಲೀಸ್ ಮಾಡಲಾಗಿತ್ತು. ಸುದ್ದಿ ತಿಳಿಯುತ್ತಿದ್ದಂತೆ ಒಂದು ಕ್ಷಣ ಶಾಕ್ ಆದ ರಾಖಿ ಮನೆಯಲ್ಲೇ ಕುಸಿದು ಬಿದ್ರಂತೆ. ಬಳಿಕ ಅವರನ್ನು ಆಸ್ಪತ್ರೆಗೆ ದಾಖಲಿಸಲಾಯ್ತು.
 ಅಷ್ಟಕ್ಕೂ ರಾಖಿ ಅವರಿಗೆ ಅಷ್ಟೊಂದು ಶಾಕ್ ಆಗೋಕೆ ಕಾರಣ ಅವರೇ ಅಭಿನಯಿಸಿದ ಸಿನಿಮಾದ ಆಡಿಯೋ ರಿಲೀಸ್ ಗೆ ಅವರನ್ನೇ ಕರೆಯದೇ ಕಾರ್ಯಕ್ರಮ ಮಾಡಿದ್ರಲ್ವಾ ಅನ್ನೋದು ಅವರ ಬೇಸರಕ್ಕೆ ಕಾರಣವಂತೆ. ಸದ್ಯ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ರಾಖಿ ಚೇತರಿಸಿಕೊಳ್ಳುತ್ತಿದ್ದು ಶೀಘ್ರವೇ ಡಿಸ್ಚಾರ್ಜ್ ಆಗಲಿದ್ದಾರಂತೆ. ಇನ್ನು ತಾನು ಆಸ್ಪತ್ರೆ ಬೆಡ್  ಮೇಲೆ ಮಗಲಿರುವ ಫೋಟೋವನ್ನು ಅವರು ಸಾಮಾಜಿಕ ಜಾಲತಾಣದಲ್ಲಿ ಶೇರ್ ಮಾಡಿದ್ದಾರೆ.

ತಾಜಾ ಸುದ್ದಿಗಳನ್ನು ಓದಲು ಮೊಬೈಲ್ ಆಪ್ ಡೌನ್‍ಲೋಡ್ ಮಾಡಿಕೊಳ್ಳಿ 
 


ಇದರಲ್ಲಿ ಇನ್ನಷ್ಟು ಓದಿ :