ಮುಂಬೈ: ಸದಾ ವಿವಾದಾತ್ಮಕ ಟ್ವೀಟ್ ಗಳಿಂದಲೇ ಸುದ್ದಿಯಾಗುವ ರಾಮ್ ಗೋಪಾಲ್ ವರ್ಮಾ ಕಣ್ಣು ಇದೀಗ ಕನ್ನಡಿಗರ ಮೇಲೆ ಬಿದ್ದಿದೆ. ಕನ್ನಡಿಗರಿಗೆ ಭಾಷಾಭಿಮಾನವೇ ಇಲ್ಲ ಎನ್ನುವ ಮೂಲಕ ಸ್ವಾಭಿಮಾನ ಕೆರಳಿಸಿದ್ದಾರೆ. ಬಾಹುಬಲಿ ಚಿತ್ರ ತೆಲುಗು ಅವತರಣಿಕೆಯಾದರೂ, ಕರ್ನಾಟಕದಲ್ಲಿ ಯಶಸ್ಸು ಗಳಿಸಿರುವುದಕ್ಕೆ ಅವರು ವಿವಾದಾತ್ಮಕ ಟ್ವೀಟ್ ಮಾಡಿದ್ದಾರೆ.ಸರಣಿ ಟ್ವೀಟ್ ಮಾಡಿದ ಅವರು ಕನ್ನಡದ ಕೆಲವು ಹೋರಾಟಗಾರರು ಕರ್ನಾಟಕದಲ್ಲಿ ಡಬ್ಬಿಂಗ್ ಚಿತ್ರಗಳು ಬೇಡವೆಂದು ವಾದಿಸುತ್ತಾರೆ. ಆದರೆ ಇದೇ ಕನ್ನಡಿಗರು ತೆಲುಗು ಬಾಹುಬಲಿ ಚಿತ್ರವನ್ನು