Widgets Magazine

10 ವರ್ಷದ ಸಂಭ್ರಮದಲ್ಲಿ ಜೊತೆಯಾದ ರಂಗದೇ ಬಸಂತಿ ಸಿನಿಮಾ ತಂಡ

mumbai| navya| Last Modified ಬುಧವಾರ, 27 ಜನವರಿ 2016 (11:32 IST)

ಆಮೀರ್ ಖಾನ್ ಅಭಿನಯದ ಎವರ್ ಗ್ರೀನ್ ಹಿಟ್ ಸಿನಿಮಾ ಅಂದ್ರೆ ಅದು ರಂಗದೇ ಬಸಂತಿ. ಇಂದಿಗೂ ಈ ಸಿನಿಮಾ ಅಂದ್ರೆ ಅಭಿಮಾನಿಗಳು ನೋಡೋದಕ್ಕೆ ಕಾಯುತ್ತಿರುತ್ತಾರೆ.ಈ ಸಿನಿಮಾಗೇ ಇದೀಗ ಹತ್ತು ವರ್ಷಗಳ ಸಂಭ್ರಮ. ಅಂದರೆ ರಂಗ್ ದೇ ಬಸಂತಿ ಸಿನಿಮಾ ರಿಲೀಸ್ ಆಗಿ ಬರೋಬ್ಬರಿ 10 ವರ್ಷಗಳಾಗಿವೆ.
ರಂಗ್ ದೇ ಬಸಂತಿ ಸಿನಿಮಾ ಹತ್ತು ವರ್ಷ ಪೂರೈಸಿರುವ ಹಿನ್ನೆಲೆಯಲ್ಲಿ ಸಿನಿಮಾ ತಂಡ ವಿಶೇಷ ಕಾರ್ಯಕ್ರಮವೊಂದನ್ನು ಆಯೋಜಿಸಿತ್ತು.

ಕಾರ್ಯಕ್ರಮದಲ್ಲಿ ಇಡೀ ಸಿನಿಮಾ ತಂಡ ಭಾಗವಹಿಸಿತ್ತು.ಅಲ್ಲದೇ ಸಿನಿಮಾಕ್ಕೆ ಕುರಿತಾದ ಡಾಕ್ಯುಮೆಂಟರಿಯನ್ನು ಇದೇ ವೇಳೆ ಬಿಡುಗಡೆಗೊಳಿಸಲಾಯ್ತು.
ಬಾಲಿವುಡ್ ನ ಮಿಸ್ಟರ್ ಪರ್ಫೆಕ್ಷನಿಸ್ಟ್ ಆಮೀರ್ ಖಾನ್ ಡಾಕ್ಯುಮೆಂಟರಿಯನ್ನು ಬಿಡುಗಡೆಗೊಳಿಸಿದ್ರು. ಕಾರ್ಯಕ್ರಮದಲ್ಲಿ ನಟ ಆಮೀರ್ ಖಾನ್ ಹಿರಿಯ ನಟಿ
ವಹೀದಾ ರೆಹಮಾನ್, ರಂಗ್ ದೇ ಬಸಂತಿ ಸಿನಿಮಾದಲ್ಲಿ ಅಭಿನಯಿಸಿದ್ದ ನಟರಾದ ಸಿದ್ಧಾರ್ಥ್, ಶರ್ಮಾನ್ ಜೋಷಿ ಮುಂತಾದವರು ಉಪಸ್ಥಿತರಿದ್ದರು.

ಇನ್ನು ಕಾರ್ಯಕ್ರಮದಲ್ಲಿ ಎಲ್ಲರೂ ರಂಗ ದೇ ಬಸಂತಿ ಎಂದು ಬರೆದ ಕಪ್ಪು ಬಣ್ಣದ ಟೀ ಶರ್ಟ್ ಧರಿಸಿ ಮಿಂಚಿದ್ರು. ಅಲ್ಲದೇ ರಂಗ್ ದೇ ಬಸಂತಿ ಸಿನಿಮಾದ ಹಾಡೊಂದಕ್ಕೆ ಎಲ್ಲರೂ ಜೊತೆಯಾಗಿ ಹೆಜ್ಜೆ ಹಾಕಿ ಎಲ್ಲರನ್ನು ರಂಜಿಸಿದ್ರು. ಅಲ್ಲದೇ ಹಳೆಯ ದಿನಗಳನ್ನು ಮೆಲುಕು ಹಾಕಿದ್ರು.



ಇದರಲ್ಲಿ ಇನ್ನಷ್ಟು ಓದಿ :