ರಾಣಿ ಮುಖರ್ಜಿ ಆಕಸ್ಮಿಕವಾಗಿ ಆ್ಯಕ್ಟರ್ ಆಗಿದ್ದಾರಂತೆ..!

ನಾಗಶ್ರೀ ಭಟ್ 

ಬೆಂಗಳೂರು, ಗುರುವಾರ, 22 ಫೆಬ್ರವರಿ 2018 (16:04 IST)

ಕಾರ್ಯಕ್ರಮವೊಂದರಲ್ಲಿ ಮಾತನಾಡಿದ ರಾಣಿ ಮುಖರ್ಜಿ, ನಾನು ಆಕಸ್ಮಿಕವಾಗಿ ಆ್ಯಕ್ಟರ್ ಆದೆ. ನಾನು ಚಲನಚಿತ್ರಗಳಲ್ಲಿ ಅಭಿನಯಿಸುವುದು ನನ್ನ ತಾಯಿಯ ನಿರ್ಧಾರವಾಗಿತ್ತು ಎಂದು ಹೇಳಿದ್ದಾರೆ.
"ನಾನೇ ನಿರ್ಧರಿಸಿರಲಿಲ್ಲ (ನಟಿಯಾಗುವುದನ್ನು), ನನ್ನ ಅಮ್ಮ ಇದನ್ನು ನಿರ್ಧರಿಸಿದ್ದರು. ನಾವು ಚಿಕ್ಕವರಿರುವಾಗ ಇರುವ ಪೀಳಿಗೆ ಬೇರೆಯದೇ ಆಗಿತ್ತು, ಇವಾಗಿನ ಹಾಗಲ್ಲ. ನಾನು ಆಜ್ಞಾಧಾರಕ ಮಗುವಾಗಿದ್ದೆ. ಆದ್ದರಿಂದ ನನ್ನ ಅಮ್ಮ ಏನು ಹೇಳಿದರೋ ಅದನ್ನು ಮಾಡಿದೆ, ಅವಳು ನಟಿಯಾಗಲು ಹೇಳಿದಳು, ಅದಕ್ಕೆ ನಟಿಯಾದೆ. ನನಗಿಂತ ಮೊದಲೇ ಅವರು ನನ್ನ ವಿಷಯವನ್ನು (ಅಭಿನಯ) ಅರಿತುಕೊಂಡಿದ್ದರು. ನಾನು ಆಕಸ್ಮಿಕವಾಗಿ ನಟಿಯಾದೆ. ಇಂದು ನನ್ನ ಅಮ್ಮನಿಗೆ ಧನ್ಯವಾದವನ್ನು ಹೇಳುತ್ತೇನೆ, ಏಕೆಂದರೆ ನಾನು ನಟಿಯಾಗುವುದನ್ನು ಹೊರತುಪಡಿಸಿ ಬೇರೆ ಏನಾಗುವುದನ್ನೂ ಯೋಚಿಸಲು ಸಾಧ್ಯವಿಲ್ಲ" ಎಂದು ರಾಣಿ ಮುಖರ್ಜಿ ತಮ್ಮ ಮುಂಬರಲಿರು ಚಿತ್ರದ ಪ್ರಚಾರದ ಸಮಾರಂಭದಲ್ಲಿ ತಾವು ಆಕಸ್ಮಿಕವಾಗಿ ಚಿತ್ರರಂಗವನ್ನು ಪ್ರವೇಶಿಸಿದ್ದರ ಕುರಿತು ಹೇಳಿಕೊಂಡರು.
 
ಈ ದಿನಗಳಲ್ಲಿ ಹುಡುಗಿಯರು ಸ್ವರಕ್ಷಣೆ ಕೌಶಲ್ಯಗಳನ್ನು ಕಲಿಯಬೇಕು ಎಂದು ರಾಣಿ ಸಲಹೆ ನೀಡಿದರು. ತಮ್ಮ ಮಗಳ ಬಗ್ಗೆ ಹೇಳುತ್ತಾ ತಮ್ಮ ಮಗಳು ಅದಿರಾಗೆ ಬಾಕ್ಸಿಂಗ್ ಮತ್ತು ಡ್ಯಾನ್ಸಿಂಗ್ ಅನ್ನು ಕಲಿಸಲು ಬಯಸುತ್ತೇನೆ ಎಂದು ಹೇಳಿದರು. "ಇಂದಿನ ಎಲ್ಲಾ ಹುಡುಗಿಯರು ಮಾರ್ಷಿಯಲ್ ಆರ್ಟ್ಸ್, ಸ್ವರಕ್ಷಣೆಯನ್ನು ಕಲಿಯಬೇಕು ಎಂದು ನಾನು ನಂಬುತ್ತೇನೆ ಮತ್ತು ಅದರ ನಂತರ ನೃತ್ಯವನ್ನು ಕಲಿಯಿರಿ. ಆದ್ದರಿಂದ ನನ್ನ ಮಗಳು ಇವೆರಡನ್ನೂ ಕಲಿಯಬೇಕೆಂದು ಬಯಸುತ್ತೇನೆ" ಎಂದು ತಮ್ಮ ಅಭಿಪ್ರಾಯವನ್ನು ತಿಳಿಸಿದರು. ತನ್ನ ಮಗಳ ಲಾಲನೆ ಪಾಲನೆಯಲ್ಲಿ ಬ್ಯುಸಿಯಾಗಿದ್ದ ರಾಣಿ ಮುಖರ್ಜಿ ಈಗ ಮತ್ತೆ ಚಿತ್ರಗಳಲ್ಲಿ ಬಣ್ಣ ಹಚ್ಚುತ್ತಿರುವುದು ಸಂತೋಷದ ವಿಷಯವಾಗಿದೆ ಎಂದು ಮೂಲಗಳು ತಿಳಿಸಿವೆ.ಇದರಲ್ಲಿ ಇನ್ನಷ್ಟು ಓದಿ :  

ಸ್ಯಾಂಡಲ್ ವುಡ್

news

ಬಿಗ್ ಬಾಸ್ ಸೀಸನ್ 5 ಮನೆಗೆ ಬೆಂಕಿ

ಬೆಂಗಳೂರು: ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ ಬಿಗ್ ಬಾಸ್ ಕನ್ನಡ ರಿಯಾಲಿಟಿ ಶೋ ಸೀಸನ್ 5 ...

news

ಕಂಗನಾ ರಣಾವತ್ ರಾಜಕೀಯ ಎಂಟ್ರಿ ಬಗ್ಗೆ ನಟಿಯ ಮ್ಯಾನೇಜರ್ ಹೇಳಿದ್ದೇನು....?

ಮುಂಬೈ : ಬಾಲಿವುಡ್ ನಟಿ ಕಂಗನಾ ರಣಾವತ್ ರಾಜಕೀಯಕ್ಕೆ ಪ್ರವೇಶಿಸುತ್ತಾರೆ ಎಂಬ ಸುದ್ದಿ ಮಾಧ್ಯಮಗಳಲ್ಲಿ ...

news

ತಮಿಳು ನಟ ವಿಜಯ್‌ ಚಿತ್ರತಂಡಕ್ಕೆನೀಡಿದ ಕಟ್ಟೆಚ್ಚರ ಏನು ಗೊತ್ತಾ...?

ಚೆನ್ನೈ : ಇತ್ತಿಚೆಗೆ ಹೊಸ ಸಿನಿಮಾಗಳು ಥಿಯೇಟರ್ ನಲ್ಲಿ ಬಿಡುಗಡೆ ಮಾಡುವ ಮೊದಲೆ ಚಿತ್ರದ ಕೆಲವೊಂದು ...

news

ಬಾಲಿವುಡ್ ನಟ ಹೃತಿಕ್ ರೋಷನ್ ಬೀದಿ ಬೀದಿಯಲ್ಲಿ ಹಪ್ಪಳ ಮಾರಿದ್ದು ಯಾಕೆ ಗೊತ್ತಾ...?

ಮುಂಬೈ : ಎಂಜಿನಿಯರಿಂಗ್ ಪದವಿ ಪಡೆಯುವ ಆಸಕ್ತಿ ಹೊಂದಿರುವ ಬಡ ವಿದ್ಯಾರ್ಥಿಗಳಿಗಾಗಿ ಸೂಪರ್ 30 ಕೋಚಿಂಗ್ ...