ಪ್ರಚಾರಕ್ಕೆ ನಿಮಗೆ ಹಿಂದೂ ಸಂತರೇ ಬೇಕಾ? ಸೈಫ್ ಅಲಿಖಾನ್ ವಿರುದ್ಧ ಕಿಡಿ ಕಾರಿದ ನೆಟ್ಟಿಗರು

ಮುಂಬೈ| Krishnaveni K| Last Modified ಬುಧವಾರ, 7 ಜುಲೈ 2021 (09:45 IST)
ಮುಂಬೈ: ಬಾಲಿವುಡ್ ನಟ ಸೈಫ್ ಆಲಿ ಖಾನ್ ಮತ್ತೆ ಹಿಂದೂಗಳ ಭಾವನೆಗೆ ಧಕ್ಕೆ ತಂದು ನೆಟ್ಟಿಗರ ಕೆಂಗಣ್ಣಿಗೆ ಗುರಿಯಾಗಿದ್ದಾರೆ.

 

ಸೈಫ್ ಅಲಿ ಖಾನ್ ಈ ಹಿಂದೆ ತಾಂಡವ್ ವೆಬ್ ಸೀರೀಸ್‍ ನಲ್ಲಿ ಹಿಂದೂಗಳಿಗೆ ನೋವುಂಟು ಮಾಡಿದ ಆರೋಪ ಎದುರಿಸಿದ್ದರು. ಅದಾದ ಬಳಿಕ ಆದಿಪುರುಷ್ ಚಿತ್ರದ ಬಗ್ಗೆ ಮಾತನಾಡುವಾಗ ರಾವಣ ಒಳ್ಳೆಯವನು ಎಂದು ವಿವಾದಕ್ಕೊಳಗಾಗಿದ್ದರು.
 
ಇದೀಗ ಸೈಫ್ ರ ‘ಭೂತ್ ಪೊಲೀಸ್’ ಚಿತ್ರದಲ್ಲಿ ನಟಿಸುತ್ತಿದ್ದಾರೆ. ಇದರ ಪೋಸ್ಟರ್ ಒಂದು ಬಿಡುಗಡೆಯಾಗಿದ್ದು, ಈ ಪೋಸ್ಟರ್ ನಲ್ಲಿ ಸೈಫ್ ಹಿಂದೆ ಹಿಂದೂ ಸಂತರ ಚಿತ್ರಗಳಿವೆ. ಇದನ್ನು ನೋಡಿ ಗರಂ ಆಗಿರುವ ನೆಟ್ಟಿಗರು ನಿಮಗೆ ಪ್ರಚಾರಕ್ಕೆ ಹಿಂದೂ ಸಂತರೇ ಬೇಕಾ? ಯಾಕೆ ಮುಸ್ಲಿಂ ಮೌಲ್ವಿಗಳ ಫೋಟೋ ಹಾಕಿಲ್ಲ ಎಂದು ತರಾಟೆಗೆ ತೆಗೆದುಕೊಂಡಿದ್ದಾರೆ.
ಇದರಲ್ಲಿ ಇನ್ನಷ್ಟು ಓದಿ :