ಸಿನಿಮಾರಂಗಕ್ಕೆ ಎಂಟ್ರಿ ಕೊಡುತ್ತಲೇ ವಿವಾದವನ್ನು ಮೈಮೇಲೆಳೆದುಕೊಂಡ ಸೈಫ್ ಆಲಿ ಖಾನ್ ಪುತ್ರಿ ನಟಿ ಸಾರಾ ಅಲಿ ಖಾನ್

ಮುಂಬೈ, ಸೋಮವಾರ, 28 ಮೇ 2018 (07:01 IST)

ಮುಂಬೈ : 'ಕೇದರನಾಥ್' ಸಿನಿಮಾ ಡೇಟ್ಸ್ ವಿಚಾರದಲ್ಲಿ ವಿವಾದ ಉಂಟಾಗಿರುವ ಹಿನ್ನೆಲೆಯಲ್ಲಿ ಇದೀಗ ಚಿತ್ರತಂಡ ನಟ ಸೈಫ್ ಆಲಿ ಖಾನ್ ಮಗಳು ಸಾರಾ ಅಲಿ ಖಾನ್ ಅವರ ವಿರುದ್ಧ ಪ್ರಕರಣ ದಾಖಲಿಸಿದೆ.


ನಟಿ ಸಾರಾ ಅಲಿ ಖಾನ್ ಅವರು ಅಭಿಷೇಕ್ ಕಪೂರ್ ನಿರ್ದೇಶಿಸುತ್ತಿರುವ 'ಕೇದರನಾಥ್' ಚಿತ್ರಕ್ಕಾಗಿ 2018 ಜೂನ್‌ ವರೆಗೂ ಡೇಟ್ಸ್ ಕೊಟ್ಟಿದ್ದರು. ಆದರೆ ನಿರ್ಮಾಪಕರಿಗೆ, ನಿರ್ದೇಶಕರಿಗೂ ನಡುವೆ ವಿವಾದಗಳು ಉಂಟಾದ ಕಾರಣ ಈ ಸಿನಿಮಾದ ನಿರ್ಮಾಣ ನಿಂತು ಹೋಗಿತ್ತು. ಆದಕಾರಣ ನಟಿ ಸಾರಾ ಅವರು ತಮ್ಮ ಮತ್ತೊಂದು ಚಿತ್ರ 'ಸಿಂಬಾ' ಸಿನಿಮಾಗೆ ಡೇಟ್ಸ್ ಅಡ್ಜೆಸ್ಟ್ ಮಾಡಿದ್ದರು.


ಆದರೆ ಇದೀಗ 'ಕೇದರನಾಥ್' ಸಿನಿಮಾಕ್ಕೆ ಇನ್ನೊಬ್ಬ ಸಿಕ್ಕಿದ ಕಾರಣ ಚಿತ್ರತಂಡ ಮತ್ತೆ ಶೂಟಿಂಗ್ ಶುರುಮಾಡಿತ್ತು. ಆದರೆ ನಟಿ ಸಾರಾ ಅವರ ಮ್ಯಾನೇಜರ್ ಮಾತ್ರ ಸಿಂಬಾ ಶೂಟಿಂಗ್ ಪೂರ್ಣವಾದ ನಂತರ  ಕೇದರ್‌‍ನಾಥ್ ಚಿತ್ರಕರಣದಲ್ಲಿ ಪಾಲ್ಗೊಳ್ಳುವುದಾಗಿ ತಿಳಿಸಿದ್ದ. ಇದರಿಂದ ಕೋಪಗೊಂಡ ಕೇದರ್‌ ನಾಥ್ ಸಿನಿಮಾ ನಿರ್ಮಾಪಕರು ಸಾರಾ ಮೇಲೆ ಪ್ರಕರಣ ದಾಖಲಿಸಿದ್ದಾರೆ. ಈ ಪ್ರಕರಣದ ಬಗ್ಗೆ ಮುಂಬೈ ಹೈ ಕೋರ್ಟ್ ಎಸ್ ಜೆ ಕಥ್‌ ವಾಲಾ ನೇತೃತ್ವದ ಪೀಠ ವಿಚಾರಣೆ ನಡೆಸಲಿದೆ ಎಂಬುದಾಗಿ ತಿಳಿದುಬಂದಿದೆ.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿಇದರಲ್ಲಿ ಇನ್ನಷ್ಟು ಓದಿ :  

ಸ್ಯಾಂಡಲ್ ವುಡ್

news

ಸಾಮಾಜಿಕ ಜಾಲತಾಣದಲ್ಲಿ ತಮ್ಮ ಅಳಲನ್ನು ತೋಡಿಕೊಂಡ ಸನ್ನಿ ಲಿಯೋನ್

ಮುಂಬೈ : ಬಾಲಿವುಡ್ ನ ಮಾದಕ ನಟಿ ಸನ್ನಿ ಲಿಯೋನ್ ಅವರು ಸಾಮಾಜಿಕ ಜಾಲತಾಣದಲ್ಲಿ ತಾವು ಭಾವುಕರಾದ ...

news

ಬಾಲಿವುಡ್ ನ ಹಿರಿಯ ನಟಿ ಗೀತಾ ಕಪೂರ್ ಇನ್ನಿಲ್ಲ!

ಮುಂಬೈ : ಪಾಕೀಝಾ ಮತ್ತು ರಝಿಯಾ ಸುಲ್ತಾನ ಚಿತ್ರಗಳ ಮೂಲಕ ಜನಪ್ರಿಯ ಗಳಿಸಿದ ಬಾಲಿವುಡ್ ನ ಹಿರಿಯ ನಟಿ ಗೀತಾ ...

news

ದೀಪಿಕಾ ರಣವೀರ್ ರವರನ್ನು ಇಷ್ಟಪಟ್ಟಿದ್ದು ಅವರ ಈ ಗುಣಗಳನ್ನು ನೋಡಿಯಂತೆ

ಮುಂಬೈ : ಗಂಡು ಹೆಣ್ಣ ಒಬ್ಬರನೊಬ್ಬರು ಇಷ್ಟಪಡಲು ಹಲವು ಕಾರಣಗಳಿರುತ್ತವೆ. ಅದೇರೀತಿ ಬಾಲಿವುಡ್ ನ ಪ್ರಣಯ ...

news

ಕಾಮಿಡಿ ಕಿಂಗ್​, ನಟ ಚಿಕ್ಕಣ್ಣನ ಕಾರಿಗೆ ಕನ್ನಹಾಕಿದ ಕಳ್ಳರು

ಬೆಂಗಳೂರು : ಇತ್ತೀಚೆಗೆ ಕಾಮಿಡಿ ಕಿಂಗ್​, ನಟ ಚಿಕ್ಕಣ್ಣನ ಕಾರಿಗೆ ಕಳ್ಳರು ಕನ್ನ ಹಾಕಿರೋ ಘಟನೆ ...