ಮುಂಬೈ: ಪ್ರಶಾಂತ್ ನೀಲ್ ನಿರ್ದೇಶನದ ಕೆಜಿಎಫ್ ಸಿನಿಮಾ ಮುಂದೆ ಶಾರುಖ್ ಖಾನ್ ‘ಜೀರೋ’ ಸಿನಿಮಾ ಈ ಹಿಂದೆ ಸೋತು ಮುಗ್ಗರಿಸಿತ್ತು. ಇದೀಗ ಮತ್ತೆ ಶಾರುಖ್ ಗೆ ನೀಲ್ ಭಯ ಶುರುವಾಗಿದೆ.ಪ್ರಶಾಂತ್ ನೀಲ್ ನಿರ್ದೇಶನದ ಸಲಾರ್ ಮತ್ತು ಶಾರುಖ್ ಖಾನ್ ನಾಯಕರಾಗಿರುವ ಡಂಕಿ ಸಿನಿಮಾ ಒಂದೇ ದಿನ ಅಂದರೆ ಡಿಸೆಂಬರ್ 22 ರಂದು ತೆರೆಗೆ ಬರುತ್ತಿದೆ.ಎರಡು ಸತತ ಹಿಟ್ ಸಿನಿಮಾಗಳ ನಂತರ ಶಾರುಖ್ ಖಾನ್ ‘ಡಂಕಿ’ ಸಿನಿಮಾ ಮೂಲಕ ತೆರೆಗೆ ಬರಲಿದ್ದಾರೆ.