ಹೈದರಾಬಾದ್: ಪ್ರಶಾಂತ್ ನೀಲ್ ನಿರ್ದೇಶನದ ಪ್ರಭಾಸ್ ನಾಯಕರಾಗಿರುವ ಸಲಾರ್ ಸಿನಿಮಾದ ಮತ್ತೊಂದು ಹಂತದ ಚಿತ್ರೀಕರಣ ಈಗ ನಡೆಯುತ್ತಿದೆ.ತಮ್ಮ ದೊಡ್ಡಪ್ಪ ಕೃಷ್ಣಂ ರಾಜು ನಿಧನದ ಬಳಿಕ ಕೆಲವು ದಿನ ಬ್ರೇಕ್ ತೆಗೆದುಕೊಂಡಿದ್ದ ಪ್ರಭಾಸ್ ಈಗ ಚಿತ್ರೀಕರಣಕ್ಕೆ ಮರಳಿದ್ದಾರೆ. ಮೊನ್ನೆಯಿಂದ ಮತ್ತೆ ಸಲಾರ್ ಶೂಟಿಂಗ್ ಆರಂಭವಾಗಿದೆ.ಆದರೆ ಈಗ ಚಿತ್ರೀಕರಣದ ಫೋಟೋ, ವಿಡಿಯೋಗಳು ಆನ್ ಲೈನ್ ನಲ್ಲಿ ಸೋರಿಕೆಯಾಗಿದ್ದು, ಚಿತ್ರತಂಡಕ್ಕೆ ತಲೆನೋವಾಗಿದೆ. ಇದಕ್ಕೂ ಮೊದಲೂ ಒಮ್ಮೆ ಸಲಾರ್ ಶೂಟಿಂಗ್ ದೃಶ್ಯಗಳು ವೈರಲ್ ಆಗಿತ್ತು. ಈಗ