Widgets Magazine

ವಿಶಿಷ್ಟವಾಗಿ ಆಹಾರ ಹಂಚಿದ ನಟ ಸಲ್ಮಾನ್ ಖಾನ್

ಮುಂಬೈ| Krishnaveni K| Last Modified ಗುರುವಾರ, 7 ಮೇ 2020 (09:29 IST)
ಮುಂಬೈ: ಬಾಲಿವುಡ್ ನಟ ಸಲ್ಮಾನ್ ಖಾನ್ ಲಾಕ್ ಡೌನ್ ಆದ ಬಳಿಕ ಎಷ್ಟೋ ಸಿನಿ ಕಾರ್ಮಿಕರಿಗೆ ನೆರವು ನೀಡಿದ್ದು ಸುದ್ದಿಯಾಗಿತ್ತು. ಇದೀಗ ಅವರು ವಿಶಿಷ್ಟ ರೀತಿಯಲ್ಲಿ ಆಹಾರ ಹಂಚಿಕೆ ಮಾಡಿ ಸುದ್ದಿಯಾಗಿದ್ದಾರೆ.

 
ಸಲ್ಮಾನ್ ಖಾನ್ ‘ಬೀಯಿಂಗ್ ಹ್ಯೂಮನ್’ ಎಂಬ ಚ್ಯಾರಿಟಿ ನಡೆಸುತ್ತಿದ್ದಾರೆ. ಇದರ ಮೂಲಕ ಹಲವು ಸಮಾಜ ಮುಖೀ ಕಾರ್ಯಕ್ರಮಗಳನ್ನು ಮಾಡುತ್ತಾ ಬಂದಿದ್ದಾರೆ.
 
ಆದರೆ ಇದೀಗ ಅದೇ ಹೆಸರನ್ನೇ ಕೊಂಚ ಬದಲಾಯಿಸಿ ‘ಬೀಯಿಂಗ್ ಹಂಗ್ರೀ’ ಎಂದು ನಾಮಕರಣ ಮಾಡಿದ ಫುಡ್ ಟ್ರಕ್ ಒಂದನ್ನು ಕಳುಹಿಸಿದ್ದು, ಅದರ ಮೂಲಕ ಹಸಿದವರಿಗೆ ಅನ್ನ ನೀಡುವ ಕೆಲಸ ಮಾಡುತ್ತಿದ್ದಾರೆ. ಅವರ ಈ ಕೆಲಸಕ್ಕೆ ಸಾಮಾಜಿಕ ಜಾಲತಾಣದಲ್ಲಿ ಭಾರೀ ಮೆಚ್ಚುಗೆ ವ್ಯಕ್ತವಾಗಿದೆ.
ಇದರಲ್ಲಿ ಇನ್ನಷ್ಟು ಓದಿ :