ಬೆಂಗಳೂರು|
Krishnaveni K|
Last Modified ಬುಧವಾರ, 18 ಡಿಸೆಂಬರ್ 2019 (09:27 IST)
ಬೆಂಗಳೂರು: ದಬಾಂಗ್ 3 ಪ್ರಿ ರಿಲೀಸ್ ಈವೆಂಟ್ ಗೆ ಬೆಂಗಳೂರಿಗೆ ಬಂದಿದ್ದ ಬಾಲಿವುಟ್ ನಟ ಸಲ್ಮಾನ್ ಖಾನ್ ತಮಗೆ ಕನ್ನಡದಲ್ಲೇ ಡಬ್ಬಿಂಗ್ ಮಾಡುವ ಐಡಿಯಾ ಕೊಟ್ಟವರು ಯಾರು ಎಂದು ಬಹಿರಂಗಪಡಿಸಿದ್ದಾರೆ.
ದಬಾಂಗ್ 3 ಸಿನಿಮಾ ಕನ್ನಡ, ತಮಿಳು, ತೆಲುಗಿನಲ್ಲೂ ಬಿಡುಗಡೆಯಾಗುತ್ತಿದೆ. ಎಲ್ಲಾ ಭಾಷೆಗಳಲ್ಲಿ ಸಲ್ಮಾನ್ ತಾವೇ ಡಬ್ಬಿಂಗ್ ಮಾಡಿರುವುದು ವಿಶೇಷ. ಕನ್ನಡದಲ್ಲಿ ಮಾತನಾಡಿದ ಬಗ್ಗೆ ಪತ್ರಿಕಾಗೋಷ್ಠಿಯಲ್ಲಿ ಸಲ್ಮಾನ್ ಗೆ ಪ್ರಶ್ನೆ ಎದುರಾಯ್ತು.
ಇದಕ್ಕೆ ಪ್ರತಿಕ್ರಿಯಿಸಿದ ಸಲ್ಮಾನ್ ‘ಕನ್ನಡದಲ್ಲಿ ಮಾತನಾಡುವ ಐಡಿಯಾ ಕೊಟ್ಟಿದ್ದು ಪ್ರಭುದೇವ. ಎಲ್ಲಾ ಭಾಷೆಗಳಲ್ಲೂ ಅದರದ್ದೇ ಆದ ಭಾಷೆಗಳಲ್ಲಿ ಡಬ್ಬಿಂಗ್ ಮಾಡಿದರೆ ಚೆಂದ ಎನಿಸಿತು. ನಂತರ ಸುದೀಪ್ ನನಗೆ ಸಹಾಯ ಮಾಡಿದರು. ಕನ್ನಡ ಮಾತ್ರವಲ್ಲ, ಯಾವುದೇ ಭಾಷೆಯಲ್ಲೂ ಡಬ್ಬಿಂಗ್ ಮಾಡುವುದು ನನಗೆ ಕಷ್ಟವೇ’ ಎಂದಿದ್ದಾರೆ.