ಮದುವೆ ಯಾವಾಗ ಎಂದು ಪ್ರಶ್ನಿಸಿದ ಮಹಿಳಾ ಪತ್ರಕರ್ತೆಗೆ ಸಲ್ಮಾನ್ ಖಾನ್ ಹೇಳಿದ್ದೇನು ಗೊತ್ತಾ?

ಬೆಂಗಳೂರು| Krishnaveni K| Last Modified ಬುಧವಾರ, 18 ಡಿಸೆಂಬರ್ 2019 (09:41 IST)
ಬೆಂಗಳೂರು: ಸಲ್ಮಾನ್ ಖಾನ್ ಎಲ್ಲೇ ಹೋದರೂ ಮದುವೆ ಬಗ್ಗೆ ಪ್ರಶ್ನೆಗಳು ಬರುತ್ತಲೇ ಇರುತ್ತವೆ. ಬಹುಶಃ ಇದಕ್ಕೆ ಉತ್ತರ ಹೇಳಿ ಸಲ್ಮಾನ್ ಗೂ ಸಾಕಾಗಿರಬಹುದು.
 

ಸಿನಿಮಾದ ಪ್ರಚಾರಕ್ಕಾಗಿ ಬೆಂಗಳೂರಿಗೆ ಬಂದ ಸಲ್ಮಾನ್ ಗೆ ಮತ್ತೆ ಮಾಧ್ಯಮಗಳು ಇದೇ ಪ್ರಶ್ನೆ ಕೇಳಿದ್ದಾರೆ. ಇದಕ್ಕೆ ಸಲ್ಮಾನ್ ಅಷ್ಟೇ ಜಾಣ್ಮೆಯಿಂದ ಉತ್ತರಿಸಿದ್ದಾರೆ.
 
ಸಲ್ಮಾನ್ ಸರ್ ಯಾವಾಗ ಮದುವೆಯಾಗುತ್ತೀರಿ ಎಂದು ಮಹಿಳಾ ಪತ್ರಕರ್ತರೊಬ್ಬರು ಪ್ರಶ್ನಿಸಿದಾಗ ‘ನೀವು ಯಾವಾಗ ಇಲ್ಲ ಅಂತೀರೋ ಆವಾಗ ಮಾಡ್ಕೊಳ್ತೀನಿ’ ಎಂದು ತಮಾಷೆಯಾಗಿ ಉತ್ತರಿಸಿದ್ದಾರೆ.
ಇದರಲ್ಲಿ ಇನ್ನಷ್ಟು ಓದಿ :