ಮುಂಬೈ: ಥಿಯೇಟರ್ ನಲ್ಲಿ ತಮ್ಮ ‘ಅಂತಿಮ್’ ಸಿನಿಮಾ ಪ್ರದರ್ಶನ ವೇಳೆ ಪಟಾಕಿ ಸಿಡಿಸಿ ಸಂಭ್ರಮಿಸಿದ ಅಭಿಮಾನಿಗಳಿಗೆ ಸಲ್ಮಾನ್ ಖಾನ್ ಕಿವಿ ಮಾತು ಹೇಳಿದ್ದಾರೆ.ಅಂತಿಮ್ ಸಿನಿಮಾ ಪ್ರದರ್ಶನ ವೇಳೆ ತೆರೆ ಮುಂದೆ ನಿಂತು ಪಟಾಕಿ ಸಿಡಿಸಿದ ಅಭಿಮಾನಿಗಳ ವಿಡಿಯೋ ವೀಕ್ಷಿಸಿದ ಸಲ್ಮಾನ್, ಥಿಯೇಟರ್ ಒಳಗೆ ಯಾರೂ ಪಟಾಕಿ ಕೊಂಡೊಯ್ಯಬೇಡಿ. ಇದರಿಂದ ಅಪಾಯಗಳಾಗಬಹುದು ಎಂದು ಕಿವಿ ಮಾತು ಹೇಳಿದ್ದಾರೆ.‘ಥಿಯೇಟರ್ ಒಳಗೆ ಪಟಾಕಿ ಸಿಡಿಸುವುದರಿಂದ ನಿಮ್ಮ ಮತ್ತು ಸುತ್ತಲಿನವರ ಪ್ರಾಣಕ್ಕೆ ತೊಂದರೆಯಾಗಬಹುದು. ಥಿಯೇಟರ್ ಮಾಲಿಕರೂ