ಹಿಂದೂ ದೇವರಿಗೆ ಅವಮಾನ: ವಿವಾದಾತ್ಮಕ ದೃಶ್ಯಕ್ಕೆ ಕತ್ತರಿ ಹಾಕಿದ ದಬಾಂಗ್ 3 ಸಿನಿಮಾ ತಂಡ

ಮುಂಬೈ| Krishnaveni K| Last Modified ಗುರುವಾರ, 19 ಡಿಸೆಂಬರ್ 2019 (10:16 IST)
ಮುಂಬೈ: ಸಲ್ಮಾನ್ ಖಾನ್ ನಾಯಕರಾಗಿ ಅಭಿನಯಿಸಿರುವ ಸಿನಿಮಾ ನಾಳೆ ಬಿಡುಗಡೆಯಾಗಲಿದ್ದು, ಇದಕ್ಕೂ ಮೊದಲೇ ಹಿಂದೂ ದೇವರಿಗೆ ಅವಮಾನ ಮಾಡಿದ ಆರೋಪಕ್ಕೆ ಗುರಿಯಾಗಿತ್ತು.

 
ಸಲ್ಮಾನ್ ನಟಿಸಿರುವ ಹುಡ್ ಹುಡ್ ಹಾಡಿನಲ್ಲಿ ಹಿಂದೂ ದೇವರಾದ ರಾಮ, ಶಿವ ಹಾಗೂ ನಾಗಸಾಧು ವೇಷಧಾರಿಗಳು ಸಲ್ಮಾನ್ ಹಿಂದೆ ಗಿಟಾರ್ ಹಿಡಿದುಕೊಂಡು ಕುಣಿಯುವ ದೃಶ್ಯಗಳಿವೆ. ಇದು ಹಿಂದೂ ದೇವರಿಗೆ ಮಾಡುವ ಅವಮಾನ ಎಂದು ಕೆಲವು ಹಿಂದೂ ಸಂಘಟನೆಗಳು ಆಪಾದಿಸಿದ್ದವು.
 
ಈ ಕಾರಣಕ್ಕೆ ವಿವಾದವಾಗುವುದು ಬೇಡ ಎಂದು ಚಿತ್ರತಂಡ ಈ ಹಾಡಿನ ದೃಶ್ಯಗಳಿಗೆ ಕತ್ತರಿ ಹಾಕಿರುವುದಾಗಿ ಘೋಷಿಸಿದೆ. ಎಲ್ಲರ ಭಾವನೆಗಳನ್ನು ಗಮನದಲ್ಲಿಟ್ಟುಕೊಂಡು, ಚಿತ್ರತಂಡ ಸ್ವಯಂ ಪ್ರೇರಿತವಾಗಿ ಚಿತ್ರದಿಂದ ಅಂತಹ ದೃಶ್ಯಗಳನ್ನು ತೆಗೆದುಹಾಕಿರುವುದಾಗಿ ಟ್ವೀಟ್ ಮಾಡಿದೆ.
ಇದರಲ್ಲಿ ಇನ್ನಷ್ಟು ಓದಿ :