Widgets Magazine

ಕಿಚ್ಚ ಸುದೀಪ್ ಜತೆಗೆ ಸಲ್ಮಾನ್ ಖಾನ್ ದಬಾಂಗ್ 3 ಪ್ರಚಾರ

ಬೆಂಗಳೂರು| Krishnaveni K| Last Modified ಶುಕ್ರವಾರ, 13 ಡಿಸೆಂಬರ್ 2019 (08:35 IST)
ಬೆಂಗಳೂರು: ಸಿನಿಮಾ ಬಿಡುಗಡೆಗೆ ಕೆಲವೇ ದಿನಗಳು ಬಾಕಿಯಿವೆ. ಡಿಸೆಂಬರ್ 20 ರಂದು ಬಿಡುಗಡೆಯಾಗಲಿರುವ ಬಾಲಿವುಡ್ ಸಿನಿಮಾದಲ್ಲಿ ಕಿಚ್ಚ ಸುದೀಪ್ ವಿಲನ್ ಪಾತ್ರ ಮಾಡಿದ್ದಾರೆ.

 
ಈ ಸಿನಿಮಾ ಹಿಂದಿ ಮಾತ್ರವಲ್ಲದೆ, ಕನ್ನಡ ಸೇರಿದಂತೆ ಬಹುಭಾಷೆಗಳಲ್ಲಿ ಬಿಡುಗಡೆಯಾಗುತ್ತಿದೆ. ಕನ್ನಡ ಅವತರಣಿಕೆಗೆ ಸ್ವತಃ ಸಲ್ಮಾನ್ ಡಬ್ ಮಾಡಿರುವುದು ವಿಶೇಷ.
 
ಈ ಸಿನಿಮಾದ ಪ್ರಚಾರ ಕೆಲಸಕ್ಕಾಗಿ ಈಗ ಸಲ್ಮಾನ್ ಬೆಂಗಳೂರಿಗೆ ಬರಲಿದ್ದಾರೆ. ಡಿಸೆಂಬರ್ 17 ರಿಂದ ಬೆಂಗಳೂರಿನಲ್ಲಿ ಕಿಚ್ಚ ಸುದೀಪ್ ಜತೆಗೆ ಸಲ್ಮಾನ್ ಪ್ರಚಾರದಲ್ಲಿ ಭಾಗಿಯಾಗಲಿದ್ದಾರೆ.




ಇದರಲ್ಲಿ ಇನ್ನಷ್ಟು ಓದಿ :