ಮುಂಬೈ : ಬಾಲಿವುಡ್ ಸೂಪರ್ ಸ್ಟಾರ್ ಸಂಜಯ್ ದತ್ ಅವರ ಜೀವನವನ್ನಾಧಾರಿತ ‘ಸಂಜು’ ಸಿನಿಮಾದಲ್ಲಿ ರಣಬೀರ್ ಕಪೂರ್ ಸಂಜಯ್ ದತ್ ಅವರ ಪಾತ್ರವನ್ನು ಚೆನ್ನಾಗಿ ನಿಭಾಯಿಸಿದ್ದಾರೆ ಎಂದು ಅನೇಕರು ಹೇಳಿದ್ದರು. ಆದರೆ ಸಂಜಯ್ ದತ್ ಅವರ ಆಪ್ತ ಸ್ನೇಹಿತ ನಟ ಸಲ್ಮಾನ್ ಖಾನ್ ಅವರು ಮಾತ್ರ ಸಂಜಯ್ ಅವರ ಪಾತ್ರಕ್ಕೆ ಯಾರೂ ನ್ಯಾಯ ಒದಗಿಸಲು ಸಾಧ್ಯವಿಲ್ಲ ಎಂದು ಹೇಳಿದ್ದಾರೆ.