ಮುಂಬೈ: ತಡವಾಗಿಯಾದರೂ ಕೊರೋನಾ ಪರಿಹಾರ ಕಾರ್ಯಕ್ಕೆ ಬಾಲಿವುಡ್ ನಟ ಶಾರುಖ್ ಖಾನ್ ಭಾರೀ ಕೊಡುಗೆ ನೀಡಿದ್ದಾರೆ. ಪ್ರಧಾನಿ ಪರಿಹಾರ ನಿಧಿಗೆ ಕೊಡುಗೆ ನೀಡಿದ್ದಲ್ಲದೆ ಶಾರುಖ್ ತನಗೆ ಜೀವನ ಕೊಟ್ಟ ಮೂರೂ ರಾಜ್ಯಗಳನ್ನೂ ಮರೆತಿಲ್ಲ. ಶಾರುಖ್ ಹುಟ್ಟಿದ್ದು ದೆಹಲಿಯಲ್ಲಿ. ಹೆಸರು ಮಾಡಿದ್ದು ಮುಂಬೈ, ಮಹಾರಾಷ್ಟ್ರದಲ್ಲಿ. ಆ ಬಳಿಕ ಕೋಲ್ಕೊತ್ತಾ ನೈಟ್ ರೈಡರ್ಸ್ ಐಪಿಎಲ್ ತಂಡವನ್ನು ಖರೀದಿಸಿ ಪಶ್ಚಿಮ ಬಂಗಾಲಕ್ಕೂ ಹತ್ತಿರವಾದರು.ಈ ಮೂರೂ ರಾಜ್ಯಗಳಿಗೂ ಶಾರುಖ್ ಮುಖ್ಯಮಂತ್ರಿ ಪರಿಹಾರ ನಿಧಿಗೆ ದೇಣಿಗೆ ನೀಡಿದ್ದಾರೆ.