ಶಾರುಖ್ ಖಾನ್ ಡ್ರೈವರ್ ನ ವಿಚಾರಣೆ ಮಾಡಿದ ಎನ್ ಸಿಬಿ

ಮುಂಬೈ| Krishnaveni K| Last Modified ಶನಿವಾರ, 9 ಅಕ್ಟೋಬರ್ 2021 (17:01 IST)
ಮುಂಬೈ: ಆರ್ಯನ್ ಖಾನ್ ಡ್ರಗ್ ಪ್ರಕರಣಕ್ಕೆ ಸಂಬಂಧಿಸಿದಂತೆ ಎನ್ ಸಿಬಿ ಅಧಿಕಾರಿಗಳು ಇಂದು ಶಾರುಖ್ ಖಾನ್ ಕಾರು ಚಾಲಕನನ್ನು ವಿಚಾರಣೆಗೆ ಕರೆಸಿಕೊಂಡಿದ್ದಾರೆ.  
> ನಿನ್ನೆ ಆರ್ಯನ್ ಮತ್ತು ಇತರ ಆರೋಪಿಗಳನ್ನು ಆರ್ಥರ್ ಜೈಲಿಗೆ ರವಾನಿಸಲಾಗಿತ್ತು. ಇದರ ಬೆನ್ನಲ್ಲೇ ಇಂದು ಎನ್ ಸಿಬಿ ಪೊಲೀಸರು ಶಾರುಖ್ ಮನೆಯ ಕಾರು ಚಾಲಕನನ್ನು ವಿಚಾರಣೆ ನಡೆಸಿದ್ದಾರೆ.>   ಸದ್ಯಕ್ಕೆ ಆರ್ಯನ್ ಮತ್ತು ಇತರರು ನ್ಯಾಯಾಂಗ ವಶದಲ್ಲಿ ಮುಂದುವರಿಯಲಿದ್ದಾರೆ. ಅವರ ಪರ ವಕೀಲರು ಸೆಷನ್ಸ್ ಕೋರ್ಟ್ ನಲ್ಲಿ ಮತ್ತೆ ಜಾಮೀನಿಗಾಗಿ ಅರ್ಜಿ ಸಲ್ಲಿಸುವ ಸಾಧ್ಯತೆಯಿದೆ.ಇದರಲ್ಲಿ ಇನ್ನಷ್ಟು ಓದಿ :