ಶಿಲ್ಪಾ ಶೆಟ್ಟಿ ಪತಿ ರಾಜ್ ಕುಂದ್ರಾ ಮೇಲೆ ಬ್ಲೂ ಫಿಲಂ ದಂಧೆ ಆರೋಪ

ಮುಂಬೈ| Krishnaveni K| Last Modified ಮಂಗಳವಾರ, 20 ಜುಲೈ 2021 (10:04 IST)
ಮುಂಬೈ: ಬಾಲಿವುಡ್ ಬೆಡಗಿ ಶಿಲ್ಪಾ ಶೆಟ್ಟಿ ಪತಿ, ಉದ್ಯಮಿ ರಾಜ್ ಕುಂದ್ರಾರನ್ನು ಬ್ಲೂ ಫಿಲಂ ನಿರ್ಮಾಣ ಮಾಡುತ್ತಿದ್ದ ಆರೋಪದ ಮೇರೆಗೆ ಮುಂಬೈ ಪೊಲೀಸರು ಬಂಧಿಸಿದ್ದಾರೆ.

 
ಪಕ್ಕಾ ಸಾಕ್ಷ್ಯ ಸಿಕ್ಕ ಹಿನ್ನಲೆಯಲ್ಲಿ ರಾಜ್ ಕುಂದ್ರಾರನ್ನು ಬಂಧಿಸಿರುವುದಾಗಿ ಮುಂಬೈ ಪೊಲೀಸರು ಹೇಳಿದ್ದಾರೆ. ಬಲವಂತವಾಗಿ ಯುವತಿಯರಿಂದ ಬ್ಲೂ ಫಿಲಂನಲ್ಲಿ ಆಕ್ಟ್ ಮಾಡಿಸಿ ಅದನ್ನು ಮೊಬೈಲ್ ಆಪ್ ಗಳಿಗೆ ಅಪ್ ಲೋಡ್ ಮಾಡಿಸುತ್ತಿದ್ದರು ಎಂಬ ಆರೋಪ ಕೇಳಿಬಂದಿದೆ.
 
ಕಳೆದ ಫೆಬ್ರವರಿಯಲ್ಲೇ ಈ ಪ್ರಕರಣ ದಾಖಲಾಗಿತ್ತು. ಆದರೆ ಸಾಕ್ಷ್ಯ ಸಿಕ್ಕ ಮೇಲೆಯೇ ಅವರನ್ನು ವಶಕ್ಕೆ ಪಡೆಯಲಾಗಿದೆ. ಇದಕ್ಕೂ ಮೊದಲು ಬಂಧನ ತಪ್ಪಿಸಲು ರಾಜ್ ಕುಂದ್ರಾ ನಿರೀಕ್ಷಣಾ ಜಾಮೀನಿಗೆ ಅರ್ಜಿ ಸಲ್ಲಿಸಿದರೂ ಪ್ರಯೋಜನವಾಗಿಲ್ಲ.
ಇದರಲ್ಲಿ ಇನ್ನಷ್ಟು ಓದಿ :