ಮುಂಬೈ: ಪತಿ ರಾಜ್ ಕುಂದ್ರಾ ಅಶ್ಲೀಲ ವಿಡಿಯೋ ನಿರ್ಮಾಣ ಪ್ರಕರಣದಲ್ಲಿ ಬಂಧನವಾದರೂ ಪತ್ನಿ, ನಟಿ ಶಿಲ್ಪಾ ಶೆಟ್ಟಿ ಸೂಪರ್ ಡ್ಯಾನ್ಸರ್ ರಿಯಾಲಿಟಿ ಶೋ ಶೂಟಿಂಗ್ ಗೆ ಹಾಜರಾಗಿದ್ದಾರೆ. ಪತಿ ಬಂಧನದ ಬಳಿಕ ಕಳೆದ ಕೆಲವು ದಿನಗಳಿಂದ ಶಿಲ್ಪಾ ಮನೆಯಲ್ಲಿಯೇ ಇದ್ದರು. ರಿಯಾಲಿಟಿ ಶೋ ಶೂಟಿಂಗ್ ಗೂ ಹಾಜರಾಗಿರಲಿಲ್ಲ. ಹೀಗಾಗಿ ಆಕೆ ಸದ್ಯಕ್ಕೆ ಶೂಟಿಂಗ್ ಗೆ ಹಾಜರಾಗಲ್ಲ ಎಂದೇ ಎಲ್ಲರೂ ನಂಬಿದ್ದರು.ಆದರೆ ಎಲ್ಲರೂ ಅಚ್ಚರಿಗೊಳಗಾಗುವಂತೆ ಶಿಲ್ಪಾ ಶೂಟಿಂಗ್ ಸೆಟ್ ಗೆ ಮರಳಿದ್ದಾರೆ.