ಮುಂಬೈ: ಬಾಲಿವುಡ್ ಮಂದಿ ಫ್ಯಾಷನ್ ಪ್ರಿಯರು. ಟ್ರೆಂಡಿ ದಿರಿಸುಗಳ ಮೂಲಕ ಸದಾ ಒಂದಿಲ್ಲೊಂದು ಸುದ್ದಿಯಲ್ಲಿರುತ್ತಾರೆ. ಬಾಲಿವುಡ್ ನ ಫ್ಯಾಷನ್ ಐಕಾನ್ ಸೋನಂ ಕಪೂರ್ ತಮ್ಮ ಹೊಸ ಬಗೆಯ ಲುಕ್ ನಿಂದ ಈಗ ಮತ್ತೆ ಸುದ್ದಿಯಲ್ಲಿದ್ದಾರೆ. ಅತ್ತ ಸೀರೆನೂ ಅಲ್ಲ ಇತ್ತ ಪ್ಯಾಂಟೂ ಅಲ್ಲದ ದಿರಿಸಿನಲ್ಲಿ ಸೋನಂ ಕಾಣಿಸಿಕೊಂಡಿದ್ದಾರೆ. ಈಗ ಪ್ಯಾಂಟ್ ಮೇಲೆ ಸೀರೆ ಉಡುವುದು ಫ್ಯಾಷನ್ ಆಗಿದೆ. ಹಾಗಾಗಿ ಸೋನಂ ಮುಂಬೈ ವಿಮಾನ ನಿಲ್ದಾಣದಲ್ಲಿ ಪ್ಯಾಂಟ್ ಮೇಲೆ ಸೀರೆ ಧರಿಸಿಕೊಂಡ