ಬಾಲಿವುಡ್ ನಟಿ ಹಾಗೂ ಮಾಜಿ ಮಿಸ್ ಇಂಡಿಯಾ ಸೋನು ವಾಲಿಯಾ (53) ಅವರು ಮುಂಬೈನ ಬಂಗೂರ್ ನಗರ್ ಪೊಲೀಸ್ ಠಾಣೆಯಲ್ಲಿ ಲೈಂಗಿಕ ಕಿರುಕುಳ ಪ್ರಕರಣ ದಾಖಲಿಸಿದ್ದಾರೆ. ಕಳೆದ ಕೆಲವು ದಿನಗಳಿಂತ ತನಗೆ ಅಸಭ್ಯ ಫೋನ್ ಕರೆಗಳು, ವಿಡಿಯೋಗಳನ್ನು ಅನಾಮಧೇಯ ವ್ಯಕ್ತಿಯಿಂದ ಬರುತ್ತಿರುವುದಾಗಿ ಅವರು ಎಫ್ಐಆರ್ನಲ್ಲಿ ದೂರಿದ್ದಾರೆ. ಬೇರೆಬೇರೆ ನಂಬರ್ಗಳನ್ನು ಬಳಸಿ ಕರೆ ಮಾಡಲಾಗುತ್ತಿದೆ ಎಂದು ತಿಳಿಸಿದ್ದು, ಪೊಲೀಸರು ಐಪಿಸಿ ಸೆಕ್ಷನ್ 354ರಡಿ ಹಾಗೂ ಐಟಿ ಕಾಯಿದೆ ಪ್ರಕಾರ ಪ್ರಕರಣ