ಮುಂಬೈ: ದುಬೈನಲ್ಲಿ ಆಕಸ್ಮಿಕವಾಗಿ ಸಾವನ್ನಪ್ಪಿದ ಬಾಲಿವುಡ್ ಮಹಿಳಾ ಸೂಪರ್ ಸ್ಟಾರ್ ಶ್ರೀದೇವಿ ಅಂತ್ಯ ಸಂಸ್ಕಾರ ಮುಂಬೈನ ವಿಲೇಪಾರ್ಲೆ ಸೇವಾ ಸಮಾಜ ಚಿತಾಗಾರದಲ್ಲಿ ನೆರವೇರಿದೆ. ಇದರೊಂದಿಗೆ ಬಾಲಿವುಡ್ ಆಳಿದ ಮೋಹಕ ತಾರೆ ಪಂಚಭೂತಗಳಲ್ಲಿ ಲೀನರಾದರು. ತಮಿಳುನಾಡಿನಲ್ಲಿ ಜನನವಾಗಿದ್ದ ಶ್ರೀದೇವಿ ಭಾರತ ಚಿತ್ರರಂಗ ಕಂಡಿದ್ದ ಅದ್ಭುತ ನಟಿ. ಅವರಿನ್ನು ನೆನಪು ಮಾತ್ರ.ಪತಿ ಬೋನಿ ಕಪೂರ್ ಅಂತಿಮ ವಿಧಿವಿಧಾನಗಳನ್ನು ನೆರವೇರಿಸಿದ್ದಾರೆ. ಹಿಂದೂ ಅಯ್ಯಂಗಾರ್ ಸಂಪ್ರದಾಯದಂತೆ ಅಂತ್ಯ ಸಂಸ್ಕಾರ ನಡೆದಿದೆ. ಈ ವೇಳೆ ಶ್ರೀದೇವಿ