ಮುಂಬೈ: ಶನಿವಾರ ರಾತ್ರಿ ದುಬೈನಲ್ಲಿ ಹೃದಯಾಘಾತದಿಂದ ಸಾವನ್ನಪ್ಪಿದ ಬಾಲಿವುಡ್ ನಟಿ ಶ್ರೀದೇವಿ ಮೃತದೇಹ ಇನ್ನೂ ಭಾರತಕ್ಕೆ ಬಂದಿಲ್ಲ. ಉದ್ಯಮಿ ಅನಿಲ್ ಅಂಬಾನಿಗೆ ಸೇರಿದ ಖಾಸಗಿ ಜೆಟ್ ವಿಮಾನದಲ್ಲಿ ನಿನ್ನೆ ರಾತ್ರಿಯಾ ಶ್ರೀದೇವಿ ಮೃತದೇಹ ಮುಂಬೈಗೆ ಆಗಮನವಾಗಲಿದೆ ಎನ್ನಲಾಗಿತ್ತು. ಆದರೆ ನಿನ್ನೆ ತಲುಪಿರಲಿಲ್ಲ.ದುಬೈನಲ್ಲಿ ಮರಣೋತ್ತರ ಪರೀಕ್ಷೆ ವಿಧಿ ವಿಧಾನಗಳು ಮುಕ್ತಾಯವಾಗಿದೆ. ಇದಾದ ಬಳಿಕ ಕುಟುಂಬ ಸದಸ್ಯರು ಫೊರೆನ್ಸಿಕ್ ಲ್ಯಾಬ್ ವರದಿಗಾಗಿ ಕಾಯುತ್ತಿದ್ದು, ಅದು ಕೈ ತಲುಪಿದ ಮೇಲೆ ಮುಂಬೈಗೆ ಆಗಮಿಸಲಿದ್ದಾರೆ