Widgets Magazine

ಸುಧಾಮೂರ್ತಿ ಬಗ್ಗೆ ಬಾಲಿವುಡ್ ಸಿನಿಮಾ! ಸಾಧಕಿಯ ಪಾತ್ರ ಮಾಡಲಿರುವುದು ಯಾರು ಗೊತ್ತಾ?!

ಮುಂಬೈ| Krishnaveni K| Last Modified ಬುಧವಾರ, 16 ಅಕ್ಟೋಬರ್ 2019 (11:24 IST)
ಮುಂಬೈ: ಇನ್ ಫೋಸಿಸ್ ಸಂಸ್ಥಾಪಕರಾದ ನಾರಾಯಣ ಮೂರ್ತಿ ಮತ್ತು ಅವರ ಪತ್ನಿ ಸುಧಾ ಮೂರ್ತಿ ಬಗ್ಗೆ ಬಾಲಿವುಡ್ ನಿರ್ದೇಶಕಿ ಅಶ್ವಿನಿ ಅಯ್ಯರ್ ಸಿನಿಮಾ ಮಾಡುತ್ತಿದ್ದಾರಂತೆ.

 
ಈ ಸಿನಿಮಾದಲ್ಲಿ ಸುಧಾಮೂರ್ತಿ ಮತ್ತು ನಾರಾಯಣ ಮೂರ್ತಿಯವರ ಜೀವನಗಾಥೆ ಇರಲಿದೆ. ಈ ವಿಚಾರವನ್ನು ಅಶ್ವಿನಿ ತಮ್ಮ ಇನ್ ಸ್ಟಾಗ್ರಾಂ ಖಾತೆಯಲ್ಲಿ ಪ್ರಕಟಿಸಿದ್ದಾರೆ.
 
ಆದರೆ ಈ ಸಿನಿಮಾದಲ್ಲಿ ಸುಧಾಮೂರ್ತಿ ಪಾತ್ರ ಮಾಡುವವರು ಯಾರು ಗೊತ್ತೇ? ಮೂಲಗಳ ಪ್ರಕಾರ ಈಗಾಗಲೇ ಈ ಪಾತ್ರಕ್ಕಾಗಿ ನಟಿ ಅಲಿಯಾ ಭಟ್ ರನ್ನು ಸಂಪರ್ಕಿಸಲಾಗಿದೆಯಂತೆ. ಆಕೆ ಒಪ್ಪಿಕೊಂಡರೆ ಸುಧಾಮೂರ್ತಿ ಪಾತ್ರವನ್ನು ನಿರ್ವಹಿಸಲಿದ್ದಾರೆ. ಸದ್ಯದಲ್ಲೇ ಈ ಬಗ್ಗೆ ಅಧಿಕೃತ ಮಾಹಿತಿ ಹೊರಬೀಳಲಿದೆ.
ಇದರಲ್ಲಿ ಇನ್ನಷ್ಟು ಓದಿ :