ವಂಚನೆ ಪ್ರಕರಣ: ಸಲ್ಮಾನ್ ಖಾನ್, ಸಹೋದರಿಗೆ ನೋಟಿಸ್

ಮುಂಬೈ| Krishnaveni K| Last Modified ಶುಕ್ರವಾರ, 9 ಜುಲೈ 2021 (10:18 IST)
ಮುಂಬೈ: ಬೀಯಿಂಗ್ ಹ್ಯೂಮನ್ ಎನ್ ಜಿಒ ಸಂಸ್ಥೆಯಡಿಯಲ್ಲಿ ವಂಚನೆ ಮಾಡಿದ ಆರೋಪದಲ್ಲಿ ಬಾಲಿವುಡ್ ನಟ ಸಲ್ಮಾನ್ ಖಾನ್, ಅವರ ಸಹೋದರಿ ಅಲ್ವಿರಾ ಖಾನ್ ಸೇರಿದಂತೆ ಒಂಭತ್ತು ಮಂದಿ ವಿರುದ್ಧ ಪೊಲೀಸರು ಸಮನ್ಸ್ ಜಾರಿ ಮಾಡಿದ್ದಾರೆ.

 
ಬೀಯಿಂಗ್ ಹ್ಯೂಮನ್ ಸಂಸ್ಥೆ ನಡೆಸುತ್ತಿರುವ ಸಲ್ಮಾನ್ ಖಾನ್ ಇದೇ ಬ್ರ್ಯಾಂಡ್ ಹೆಸರಿನಲ್ಲಿ ಕೆಲವು ಉತ್ಪನ್ನಗಳನ್ನೂ ಮಾರಾಟ ಮಾಡುತ್ತಾರೆ. ಇದೀಗ ಸಂಸ್ಥೆಯ ಕೆಲವರು ತನಗೆ ಫ್ರಾಂಚೈಸಿ ತೆರೆಯಲು ಹೇಳಿ ದಾಸ್ತಾನು ನೀಡದೇ ವಂಚಿಸಿದ್ದಾರೆ ಎಂದು ಚಂಢೀಘಡ ಪೊಲೀಸರಿಗೆ ಅರುಣ್ ಗುಪ್ತಾ ಎಂಬವರು ದೂರು ನೀಡಿದ್ದಾರೆ.
 
ಈ ಸಂಬಂಧ ದೂರು ದಾಖಲಿಸಿಕೊಂಡಿರುವ ಪೊಲೀಸರು ಜುಲೈ 13 ರೊಳಗಾಗಿ ವಿಚಾರಣೆಗೆ ಹಾಜರಾಗಲು ನೋಟಿಸ್ ನೀಡಿದ್ದಾರೆ.
ಇದರಲ್ಲಿ ಇನ್ನಷ್ಟು ಓದಿ :