ನಟ ಸುನಿಲ್ ಶೆಟ್ಟಿ ಅಪಾರ್ಟ್ ಮೆಂಟ್ ಗೂ ತಟ್ಟಿದ ಡೆಲ್ಟಾ ವೈರಸ್ ಭೀತಿ

ಮುಂಬೈ| Krishnaveni K| Last Modified ಮಂಗಳವಾರ, 13 ಜುಲೈ 2021 (09:51 IST)
ಮುಂಬೈ: ದೇಶದೆಲ್ಲೆಡೆ ಈಗ ಡೆಲ್ಟಾ ವೈರಸ್ ನದ್ದೇ ಸದ್ದು. ಈಗ ಈ ಮಹಾಮಾರಿ ಭೀತಿ ಬಾಲಿವುಡ್ ನಟ ಸುನಿಲ್ ಶೆಟ್ಟಿಗೂ ತಟ್ಟಿದೆ.

 

ಮುಂಬೈನ ಸುನಿಲ್ ಶೆಟ್ಟಿ ವಾಸವಿರುವ ಅಪಾರ್ಟ್ ಮೆಂಟ್ ನಲ್ಲಿ ಕೆಲವರಲ್ಲಿ ಡೆಲ್ಟಾ ವೈರಸ್ ಸೋಂಕು ದೃಢಪಟ್ಟಿದೆಯಂತೆ. ಇದೇ ಕಾರಣಕ್ಕೆ ಈಗ ಸುನಿಲ್ ಅಪಾರ್ಟ್ ಮೆಂಟ್ ಸೀಲ್ ಡೌನ್ ಮಾಡಲಾಗಿದೆ.
 
ದಕ್ಷಿಣ ಮುಂಬೈನ ಪೃಥ್ವಿ ಅಪಾರ್ಟ್ ಮೆಂಟ್ಸ್ ಕಟ್ಟಡವನ್ನು ಮುಂಬೈ ನಗರ ಪಾಲಿಕೆ ಸೀಲ್ ಡೌನ್ ಮಾಡಿದೆ. ಇದುವರೆಗೆ ಈ ಅಪಾರ್ಟ್ ಮೆಂಟ್ ನ ಐವರಲ್ಲಿ ಡೆಲ್ಟಾ ತಳಿಯ ಕೊರೋನಾ ಕಾಣಿಸಿಕೊಂಡಿದೆ ಎನ್ನಲಾಗಿದೆ. ಹೀಗಾಗಿ ನಟ, ಸೇರಿದಂತೆ ಇಲ್ಲಿನ ನಿವಾಸಿಗಳ ಓಡಾಟಕ್ಕೆ ನಿರ್ಬಂಧ ವಿಧಿಸಲಾಗಿದೆ.
ಇದರಲ್ಲಿ ಇನ್ನಷ್ಟು ಓದಿ :