ಬಾಲಿವುಡ್ ನಟಿ ಸನ್ನಿ ಲಿಯೋನ್ ಹಾಗೂ ಅವರ ಪತಿ ಡೇನಿಯಲ್ ವೆಬರ್ ಬಾಳಿಗೆ ಇಬ್ಬರು ಸದಸ್ಯರಿಬ್ಬರು ಆಗಮಿಸಿದ್ದು ಅವರ ಸಂತೋಷ ದುಪ್ಪಟ್ಟಾಗಿದೆ. ಸನ್ನಿ ಲಿಯೋನ್ ಪತಿ ಡೇನಿಯಲ್ ವೆಬರ್ ಕಳೆದ ವರ್ಷ ಜೂನ್ನಲ್ಲಿ ನಿಶಾ ಕೌರ್ ಎಂಬ ಬಾಲಕಿಯನ್ನು ದತ್ತು ಪಡೆದುಕೊಂಡಿದ್ದರು. ಇದೀಗ ಅವಳಿ ಗಂಡು ಮಕ್ಕಳು ಅವರ ಮಡಿಲು ತುಂಬಿದ್ದಾರೆ. ಬಾಡಿಗೆ ತಾಯಿ ಮೂಲಕ ಸನ್ನಿ ಮಗು ಪಡೆದಿದ್ದು, ನಮ್ಮ ಕುಟುಂಬ ಪರಿ ಪೂರ್ಣವಾಗಿದೆ ಎಂದು ಖುಷಿಯನ್ನು ಹಂಚಿಕೊಂಡಿದ್ದಾರೆ.