ಸ್ವಲ್ಪದರಲ್ಲೇ ಪ್ರಾಣಾಪಾಯದಿಂದ ಪಾರಾದ ಸನ್ನಿ ಲಿಯೋನ್

mumbai| venu| Last Modified ಗುರುವಾರ, 1 ಜೂನ್ 2017 (11:22 IST)
ಬಾಲಿವುಡ್ ಬೆಡಗಿ ಸನ್ನಿ ಲಿಯೋನ್ ಸ್ವಲ್ಪದರಲ್ಲೇ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಸನ್ನಿ ಲಿಯೋನ್ ಪ್ರೈವೇಟ್ ವಿಮಾನದಲ್ಲಿ ಪ್ರಯಾಣಿಸುತ್ತಿದ್ದಾಗ ವಿಮಾನ ಬಹುತೇಕ ಪತನವಾಗಿದೆ. ಪೈಲಟ್ ಜಾಗರೂಕತೆಯಿಂದ ಸನ್ನಿ ಪ್ರಾಣಾಪಾಯದಿಂದ ಪಾರಾಗಿದ್ದಾರೆ.
 

ಪತಿ ಡ್ಯಾನಿಯಲ್ ವೆನ್ನರ್ ಜೊತೆ ಸನ್ನಿ ಲಿಯೋನ್ ಮುಂಬೈನತ್ತ ಪ್ರೈವೇಟ್ ವಿಮಾನದಲ್ಲಿ ತೆರಳುತ್ತಿದ್ದರು. ಪ್ರತೀಕೂಲ ಹವಾಮಾನ ಹಿನ್ನೆಲೆಯಲ್ಲಿ 5 ಸೀಟರ್ ವಿಮಾನ ಸಂಕಷ್ಟಕ್ಕೆ ಸಿಲುಕಿದೆ. ಕೂಡಲೆ ಜಾಗ್ರತೆ ವಹಿಸಿದ ಪೈಲಟ್ ವಿಮಾನವನ ಔರಂಗಾಬಾದ್`ನಲ್ಲಿ ಕ್ರಾಶ್ ಲ್ಯಾಂಡಿಂಗ್ ಮಾಡಿದ್ದಾರೆ.
 
ಈ ಕುರಿತಂತೆ ಸನ್ನಿ ಲಿಯೋನ್ ಟ್ವಿಟ್ಟರ್`ನಲ್ಲಿ ಹೇಳಿಕೊಂಡಿದ್ಧಾರೆ. ಭಯಾನಕ ಅನುಭವ ಬಿಚ್ಚಿಟ್ಟಿರುವ ಸನ್ನಿ ಪೈಲಟ್`ಗೆ ಥ್ಯಾಂಕ್ಸ್ ಹೇಳಿದ್ದಾರೆ. ಅಪಘಾತದ ಬಳಿಕ ಆಘಾತಗೊಂಡ ಸನ್ನಿ ಮತ್ತೆ ವಿಮಾನದ ತಂಟೆಗೆ ಹೋಗದೇ ಕಾರಿನಲ್ಲಿ ಮುಂಬೈಗೆ ತೆರಳಿದ್ದಾರೆ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿಇದರಲ್ಲಿ ಇನ್ನಷ್ಟು ಓದಿ :