ತಿರುವನಂತಪುರಂ: ಮಹಾಮಳೆಗೆ ಇಡೀ ಕೇರಳವೇ ಬೆಚ್ಚಿಬಿದ್ದಿದೆ. ಕೆಲವು ನಟ, ನಟಿಯರು ತಮ್ಮಿಂದ ಆದ ಸಹಾಯ ಮಾಡಿದ್ದಾರೆ. ಇನ್ನು ಕೆಲವು ನಟ-ನಟಿಯರು ಸಹಾಯ ಮಾಡಿ ಎಂದು ನೆಪ ಮಾತ್ರಕ್ಕೆ ಟ್ವೀಟರ್ ನಲ್ಲಿ ಪೋಸ್ಟ್ ಮಾಡಿ ಸುಮ್ಮನಾಗಿದ್ದಾರೆ. ಆದರೆ ಈ ನಟಿ ಮಾತ್ರ ಮಾನವೀಯತೆ ಮರೆದಿದ್ದಾಳೆ. ಹಾಗೇ ಅದನ್ನೂ ಎಲ್ಲಿಯೂ ಹೇಳಿಕೊಂಡಿಲ್ಲ. ಅಷ್ಟಕ್ಕೂ ಈ ನಟಿ ಎಂದರೆ ಎಲ್ಲರೂ ಮೂಗು ಮುರಿಯುವವರೇ ಹೆಚ್ಚು. ಆದರೆ ಇಂದು ಆಕೆ ತನ್ನ ಮಾನವೀಯತೆಯ ಮೂಲಕ ಎಲ್ಲರ ಮನಗೆದ್ದಿದ್ದಾರೆ.