Widgets Magazine

ಸುಶಾಂತ್ ಸಿಂಗ್ ರಜಪೂತ್ ಸಾವಿನ ಬಳಿಕ ಅವರ ಕುಟುಂಬ ಕೈಗೊಂಡಿರುವ ತೀರ್ಮಾನವೇನು ಗೊತ್ತಾ?!

ಮುಂಬೈ| Krishnaveni K| Last Modified ಭಾನುವಾರ, 28 ಜೂನ್ 2020 (09:30 IST)
ಮುಂಬೈ: ಆತ್ಮಹತ್ಯೆ ಮಾಡಿಕೊಂಡು ಸಾವಿಗೀಡಾದ ಸುಶಾಂತ್ ಸಿಂಗ್ ರಜಪೂತ್ ಸ್ಮರಣಾರ್ಥ ಅವರ ಕುಟುಂಬ ಮಹತ್ವದ ನಿರ್ಧಾರವೊಂದನ್ನು ಕೈಗೊಂಡಿದೆ.
 

ಸುಶಾಂತ್ ಹೆಸರಿನಲ್ಲಿ ಒಂದು ಫೌಂಡೇಷನ್ ಮತ್ತು ಅವರ ಪಾಟ್ನಾದ ನಿವಾಸವನ್ನು ಸ್ಮಾರಕವಾಗಿ ಮಾರ್ಪಡಿಸಲು ಅವರ ಕುಟುಂಬ ವರ್ಗ ನಿರ್ಧರಿಸಿದೆ.
 
ಸುಶಾಂತ್ ಎಷ್ಟೋ ಉದಯೋನ್ಮುಖ ಕಲಾವಿದರಿಗೆ ಸ್ಪೂರ್ತಿಯಾದವರು. ಹೀಗಾಗಿ ಅವರ ಹೆಸರಿನಲ್ಲಿ ಎಸ್ಎಸ್ಆರ್ ಫೌಂಡೇಷನ್ ಸ್ಥಾಪಿಸಲಾಗುವುದು ಮತ್ತು ಇದು ಉದಯೋನ್ಮುಖ ಕಲಾವಿದರಿಗೆ ನೆರವಾಗಲಿದೆ. ಇನ್ನು ಅವರ ಮನೆ ಸ್ಮಾರಕವಾಗಿ ಬದಲಾಗಲಿದ್ದು, ಇದರಲ್ಲಿ ಸುಶಾಂತ್ ಬಳಸುತ್ತಿದ್ದ ಟೆಲಿಸ್ಕೋಪ್, ಗಿಟಾರ್ ಸೇರಿದಂತೆ ಅವರ ಪ್ರೀತಿ ಪಾತ್ರ ವಸ್ತುಗಳನ್ನು ಇರಿಸಲಾಗುತ್ತದೆ ಎಂದು ಕುಟುಂಬ ವರ್ಗ ಹೇಳಿಕೆ ಬಿಡುಗಡೆ ಮಾಡಿದೆ.
ಇದರಲ್ಲಿ ಇನ್ನಷ್ಟು ಓದಿ :