ನೆಟ್ಟಿಗರಿಂದ ಶೇಮ್ ಆನ್ ಬಾಲಿವುಡ್ ಅಭಿಯಾನ!

ಮುಂಬೈ| Krishnaveni K| Last Modified ಬುಧವಾರ, 13 ಅಕ್ಟೋಬರ್ 2021 (09:10 IST)
ಮುಂಬೈ: ಆರ್ಯನ್ ಖಾನ್ ಮತ್ತಿತರನ್ನು ಡ್ರಗ್ ಕೇಸ್ ನಲ್ಲಿ ಬಂಧಿಸಿದ ಸಮೀರ್ ವಾಂಖೆಡೆಯನ್ನು ಮಫ್ತಿಯಲ್ಲಿರುವ ಪೊಲೀಸರೊಬ್ಬರು ಹಿಂಬಾಲಿಸುತ್ತಿದ್ದಾರೆ ಎಂಬ ಸುದ್ದಿಗಳ ಬೆನ್ನಲ್ಲೇ ನೆಟ್ಟಿಗರು ‘ಶೇಮ್ ಆನ್ ಬಾಲಿವುಡ್’ ಅಭಿಯಾನ ಆರಂಭಿಸಿದ್ದಾರೆ.
 

ಒಂದೆಡೆ ಸಮೀರ್ ವಾಂಖಡೆ ಮೇಲೆ ಒತ್ತಡ ಹೇರಲು ಅನಾಮಿಕರೊಬ್ಬರು ಹಿಂಬಾಲಿಸಿ ಅವರ ಚಲನವಲನಗಳ ಬಗ್ಗೆ ನಿಗಾ ವಹಿಸಿದ್ದರೆ ಇತ್ತ ಬಾಲಿವುಡ್ ಮಂದಿ ಡ್ರಗ್ ಕೇಸ್ ನಲ್ಲಿ ಸಿಲುಕಿರುವ ಆರ್ಯನ್ ಮೇಲೆ  ಬಹಿರಂಗವಾಗಿ ಅನುಕಂಪ, ಬೆಂಬಲ ವ್ಯಕ್ತಪಡಿಸುತ್ತಿದ್ದಾರೆ.
 
ಇದರಿಂದಾಗಿ ಟ್ವಿಟರಿಗರು ಬಾಲಿವುಡ್ ಮಂದಿ ಮೇಲೆ ಕಿಡಿ ಕಾರುತ್ತಿದ್ದಾರೆ. ಡ್ರಗ್ ಕೇಸ್ ನಲ್ಲಿ ಸಿಲುಕಿರುವ ವ್ಯಕ್ತಿಯೊಬ್ಬರನ್ನು ಬೆಂಬಲಿಸುತ್ತಿರುವ ನಿಮಗೆ ನಾಚಿಕೆಯಾಗಬೇಕು. ಇನ್ನು ಮುಂದೆ ಈ ಖಾನ್ ದಾನ್ ಗಳನ್ನು ಯಾರೂ ಹೀರೋಗಳು ಎಂದು ಕರೆಯಬೇಡಿ ಎಂದು ಟ್ವಿಟರಿಗರು ಜರೆದಿದ್ದಾರೆ.
ಇದರಲ್ಲಿ ಇನ್ನಷ್ಟು ಓದಿ :