ಭಾರತೀಯ ಚಿತ್ರರಂಗದಲ್ಲೇ ಅತ್ಯಂತ ನಿರೀಕ್ಷಿತ ಹಾಗೂ ಬಹುಕೋಟಿ ವೆಚ್ಚದ ಮಹಾಕಾವ್ಯ ಆಧಾರಿತ ರಾಮಾಯಣ ಸಿನಿಮಾದ ಅಧಿಕೃತ ಟ್ರೇಲರ್ ಇಂದು ಮುಂಜಾನೆ ಅತ್ಯಂತ ಪವಿತ್ರವಾದ ಬ್ರಾಹ್ಮಿ ಮುಹೂರ್ತದಲ್ಲಿ ಬಿಡುಗಡೆಯಾಗಿದೆ. ಬಿಡುಗಡೆಯಾದ ಕೆಲವೇ ನಿಮಿಷಗಳಲ್ಲಿ ಟ್ರೇಲರ್ ಸಾಮಾಜಿಕ ಜಾಲತಾಣಗಳಲ್ಲಿ ಸೃಷ್ಟಿಸಿರುವ ಸುಂಟರಗಾಳಿ, ಭಾರತೀಯ ಚಿತ್ರರಂಗದ ಹೊಸ ದಾಖಲೆಗಳಿಗೆ ನಾಂದಿ ಹಾಡಿದೆ. ಯಶ್-ರಣಬೀರ್ ಜುಗಲ್ಬಂಧಿ: ಕಣ್ಣುಕೋರೈಸುವ ಆಕ್ಷನ್ ದೃಶ್ಯಗಳು ಚಿತ್ರಪ್ರೇಮಿಗಳು ಮತ್ತು ಅಭಿಮಾನಿಗಳು ಕಾತರದಿಂದ ಕಾಯುತ್ತಿದ್ದ ಈ ಟ್ರೇಲರ್ನಲ್ಲಿ ಪ್ರಮುಖವಾಗಿ ಗಮನ ಸೆಳೆದಿರುವುದು