Widgets Magazine

ತರಕಾರಿ ಸಂತೆಯಲ್ಲಿ ವಿರಾಟ್-ಅನುಷ್ಕಾ ದಂಪತಿ!

ನವದೆಹಲಿ| Krishnaveni K| Last Modified ಮಂಗಳವಾರ, 5 ನವೆಂಬರ್ 2019 (09:20 IST)
ನವದೆಹಲಿ: ಸದ್ಯಕ್ಕೆ ಕ್ರಿಕೆಟ್ ನಿಂದ ಬಿಡುವು ಪಡೆದಿರುವ ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಪತ್ನಿ ಅನುಷ್ಕಾ ಶರ್ಮಾ ಜತೆ ಪ್ರವಾಸ ಮಾಡುತ್ತಿದ್ದಾರೆ.

 
ಭೂತಾನ್ ಪ್ರವಾಸದಲ್ಲಿರುವ ಈ ಜೋಡಿ ಜಾಲಿ ಮೂಡ್ ನಲ್ಲಿದೆ. ಇಲ್ಲಿನ ಸಾವಯವ ತರಕಾರಿಗಳ ಮಾರುಕಟ್ಟೆಯಲ್ಲಿ ಸಾಮಾನ್ಯರಂತೇ ಸುತ್ತಾಡುತ್ತಿರುವ ಫೋಟೋವನ್ನು ಅನುಷ್ಕಾ ತಮ್ಮ ಇನ್ ಸ್ಟಾಗ್ರಾಂ ಪುಟದಲ್ಲಿ ಪ್ರಕಟಿಸಿದ್ದು, ಬಾಲ್ಯದ ನೆನಪುಗಳನ್ನು ಮೆಲುಕು ಹಾಕಿದಂತಾಗಿದೆ ಎಂದು ಬರೆದುಕೊಂಡಿದ್ದಾರೆ.
 
ವಿರಾಟ್ ಕೊಹ್ಲಿ ಇಂದು ಜನ್ಮದಿನ ಆಚರಿಸಿಕೊಳ್ಳುತ್ತಿದ್ದಾರೆ. ಇಲ್ಲಿಯೇ ಈ ಜೋಡಿ ಬರ್ತ್ ಡೇ ಸಂಭ್ರಮ ಆಚರಿಸಿಕೊಳ್ಳಲಿದ್ದಾರೆ.




ಇದರಲ್ಲಿ ಇನ್ನಷ್ಟು ಓದಿ :