ನನ್ನ ಲೈಫಲ್ಲಿ ಮಹಿಳೆಯರೇ ಸ್ಫೂರ್ತಿ. ನಾನು ಮಹಿಳೆಯರ ಮೈಂಡ್ ಸೆಟ್ ಅರ್ಥಮಾಡಿಕೊಂಡಿದ್ದೇನೆ. ನನಗೆ ಇಬ್ಬರು ಸಹೋದರಿಯರಿದ್ದಾರೆ. ಅಲ್ದೇ ನನ್ನ ಅಜ್ಜಿ ಇದ್ದಾಳೆ. ಇವರೆಲ್ಲಾ ತುಂಬಾ ಸ್ಟ್ರಾಂಗ್ ವುಮೇನ್ ಎಂದು ಮಾಧ್ಯಮದವರ ಪ್ರಶ್ನೆಗೆ ಬಾಲಿವುಡ್ ನಟ ಅಜಯ್ ದೇವಗನ್ ಪ್ರತಿಕ್ರಿಯೆ ನೀಡಿದ್ದಾರೆ. ಬಾಲಿವುಡ್ ನಟ ಅಜಯ್ ದೇವಗನ್ ಮಹಿಳೆಯರ ಮೈಂಡ್ ಸೆಟ್ ಅರ್ಥಮಾಡಿಕೊಂಡಿರುವ ಬಗ್ಗೆ ರಿವೀಲ್ ಮಾಡಿದ್ದಾರೆ. ಮಹಿಳೆಯರಿಂದಲೇ ತಮ್ಮ ಖಾಸಗಿ ಬದುಕು ಸುತ್ತವರೆದಿದೆ ಎಂದು ಅಜಯ್ ತಿಳಿಸಿದ್ದಾರೆ.