ಮುಂಬೈ: ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಮತ್ತು ಅನುಷ್ಕಾ ಶರ್ಮಾ 2017 ರಲ್ಲಿ ತಮ್ಮ ವಿವಾಹವಾಗುವಾಗ ಆದಷ್ಟು ಮಾಧ್ಯಮಗಳನ್ನು ದೂರವಿಟ್ಟಿದ್ದರು.ದೂರದ ಇಟೆಲಿಯಲ್ಲಿ ಖಾಸಗಿಯಾಗಿ ನಡೆದ ಇವರ ವಿವಾಹ ಸಮಾರಂಭ ಎಷ್ಟು ಸೀಕ್ರೆಟ್ ಆಗಿತ್ತೆಂದರೆ ಮದುವೆಯಾದ ಬಳಿಕವಷ್ಟೇ ಇಬ್ಬರೂ ಅದನ್ನು ತಮ್ಮ ಸಾಮಾಜಿಕ ಜಾಲತಾಣಗಳ ಮೂಲಕ ಬಹಿರಂಗಗೊಳಿಸಿದ್ದರು.ಇದೀಗ ಸಂದರ್ಶನವೊಂದರಲ್ಲಿ ಅನುಷ್ಕಾ ಅಂದು ತಮ್ಮ ವಿವಾಹವನ್ನು ಸೀಕ್ರೆಟ್ ಆಗಿಡಲು ಮಾಡಿದ್ದ ಹರಸಾಹಸಗಳನ್ನು ಬಹಿರಂಗಪಡಿಸಿದ್ದಾರೆ. ಅಡುಗೆಯವರಿಗೂ ತಮ್ಮ ವಿವಾಹದ ಬಗ್ಗೆ ಸುಳಿವು ಸಿಗದೇ