ಮುಂಬೈ: ಪತಿ ವಿರಾಟ್ ಕೊಹ್ಲಿ ಇದೀಗ ದ.ಆಫ್ರಿಕಾದಲ್ಲಿ ಕ್ರಿಕೆಟ್ ಆಡಲು ತೆರಳಿದ ವೇಳೆ ಪತ್ನಿ ಅನುಷ್ಕಾ ಶರ್ಮಾ ಮುಂಬೈನ ತಮ್ಮ ಭವ್ಯ ನಿವಾಸದಲ್ಲಿ ಒಬ್ಬಂಟಿಯಾಗಿ ಕಾಲ ಕಳೆಯಬೇಕಿದೆ. ಹಾಗಂತ ಅನುಷ್ಕಾ ಏನೂ ಖಾಲಿ ಕೂತಿಲ್ಲ. ಶೂಟಿಂಗ್ ನಲ್ಲಿ ಬ್ಯುಸಿ ಇದ್ದಾರೆ. ಹಾಗಿದ್ದರೂ ರಜೆ ದಿನ ಒಂಟಿ ಒಂಟಿಯಾಗಿರುವುದು ಬೋರೋ ಬೋರು ಎನ್ನುತ್ತಾ ಕಾಲ ಕಳೆಯಬೇಕಾಗಿದೆ.ಆದರೆ ರಜಾ ದಿನ ಅನುಷ್ಕಾಗೆ ವಿರಾಟ್ ಇಲ್ಲದ ಬೇಜಾರು ಕಳೆಯಲು ಜತೆಯಾಗಿದ್ದು ಯಾರು ಗೊತ್ತಾ?