ಮುಂಬೈ : 1995ರಲ್ಲಿ ಬಿಡುಗಡೆಯಾದ ವೀರ್ ಗತಿ ಚಿತ್ರದಲ್ಲಿ ಸಲ್ಮಾನ್ ಖಾನ್ ಅವರಿಗೆ ಜೋಡಿಯಾಗಿ ನಟಿಸಿದ ಬಾಲಿವುಡ್ ನಟಿ ಪೂಜಾ ದದ್ವಾಲ್ ಅವರು ಆರ್ಥಿಕ ಸಮಸ್ಯೆಯಿಂದ ಬಳಲುತ್ತಿದ್ದು, ಈಗ ನಟ ಸಲ್ಮಾನ್ ಖಾನ್ ಅವರಲ್ಲಿ ಸಹಾಯಹಸ್ತ ಕೇಳುತ್ತಿದ್ದಾರೆ. ನಟಿ ಪೂಜಾ ದದ್ವಾಲ್ ಅವರು ಟಿಬಿ ಹಾಗೂ ಶ್ವಾಸಕೋಶ ಸಂಬಂಧಿ ಕಾಯಿಲೆಯಿಂದ ಬಳಲುತ್ತಿದ್ದು, 15 ದಿನಗಳಿಂದ ಮುಂಬೈನ ಟಿಬಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಇವರ ಆರೋಗ್ಯ ಹದಗೆಡುತ್ತಿದ್ದಂತೆ ಪತಿ ಹಾಗೂ ಆತನ