ಪೋರ್ಬ್ಸ್ ಪಟ್ಟಿಯಲ್ಲಿ ಅಗ್ರಸ್ಥಾನ ಪಡೆದ ಸೆಲೆಬ್ರಿಟಿ ಯಾರು ಗೊತ್ತಾ?

ಮುಂಬೈ, ಗುರುವಾರ, 6 ಡಿಸೆಂಬರ್ 2018 (07:00 IST)

ಮುಂಬೈ : 2018 ನೇ ಸಾಲಿನ ಭಾರತೀಯ ಸೆಲೆಬ್ರಿಟಿ ಪಟ್ಟಿಯಲ್ಲಿ ಬಾಲಿವುಡ್ ನ ನಟರೊಬ್ಬರು ಅಗ್ರಸ್ಥಾನವನ್ನು ಪಡೆದುಕೊಂಡಿದ್ದಾರೆ.


ಹೌದು. ಪೋರ್ಬ್ಸ್ ಬುಧವಾರ 2018 ನೇ ಸಾಲಿನ ಭಾರತೀಯ ಸೆಲೆಬ್ರಿಟಿ ಪಟ್ಟಿಯನ್ನು ಬಿಡುಗಡೆ ಮಾಡಿದೆ. ಇದರಲ್ಲಿ ಬಾಲಿವುಡ್ ನಟ ಸಲ್ಮಾನ್ ಖಾನ್ ಅವರು ಸತತ ಮೂರನೇ ಬಾರಿಯು ಉಳಿಸಿಕೊಂಡಿದ್ದಾರೆ. ಪೋರ್ಬ್ಸ್ ಪಟ್ಟಿಯಲ್ಲಿರುವ 100 ಭಾರತೀಯ ಗಣ್ಯರ ಪೈಕಿ ಸಲ್ಮಾನ್ ಖಾನ್ ಈ ಬಾರಿ ಸಿನಿಮಾ, ಉತ್ಪನ್ನಗಳ ಪ್ರಚಾರ ಮೊದಲಾದುವುಗಳಿಂದ 253 ಕೋಟಿ ರೂ. ಆದಾಯ ಗಳಿಕೆ ಮಾಡಿದ್ದಾರೆ. ಈ ಮೂಲಕ ಅವರು ಪಟ್ಟಿಯಲ್ಲಿ ಮೊದಲ ಸ್ಥಾನವನ್ನು ಪಡೆದುಕೊಂಡಿದ್ದಾರೆ.


ಇನ್ನು ಈ ಪಟ್ಟಿಯಲ್ಲಿ ವಿರಾಟ್ ಕೊಹ್ಲಿ (228 ಕೋಟಿ.ರೂ.) ಎರಡನೇ ಸ್ಥಾನದಲ್ಲಿದ್ದಾರೆ. ಅಕ್ಷಯ್ ಕುಮಾರ್ (185 ಕೋಟಿ ರೂ,) ಮೂರನೇ ಸ್ಥಾನ, ದೀಪಿಕಾ ಪಡುಕೋಣೆ (112 ಕೋಟಿ ರೂ.ಗಳಿಕೆ) ನಾಲ್ಕನೇ ಸ್ಥಾನದಲ್ಲಿದ್ದಾರೆ. ಟೀಂ ಇಂಡಿಯಾದ ಮಾಜಿ ನಾಯಕ ಎಂ.ಎಸ್. ಧೋನಿ ಐದನೇ ಸ್ಥಾನ, ಅಮೀರ್ ಖಾನ್ ಆರನೇ ಸ್ಥಾನ, ಅಮಿತಾಬ್ ಬಚ್ಚನ್ ಏಳನೇ ಸ್ಥಾನ, ರಣವೀರ್ ಸಿಂಗ್ ಎಂಟನೆ ಸ್ಥಾನ, ಸಚಿನ್ ತೆಂಡೂಲ್ಕರ್ ಒಂಭತ್ತನೇ ಸ್ಥಾನ ಹಾಗೂ  ಅಜಯ್ ದೇವಗನ್ ಹತ್ತನೇ ಸ್ಥಾನ ಪಡೆದುಕೊಂಡಿದ್ದಾರೆ.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ.
 

 ಇದರಲ್ಲಿ ಇನ್ನಷ್ಟು ಓದಿ :  

ಸ್ಯಾಂಡಲ್ ವುಡ್

news

‘ದಮಯಂತಿ’ ಚಿತ್ರಕ್ಕೆ ನಟಿ ರಾಧಿಕಾ ತೆಗೆದುಕೊಂಡ ಸಂಭಾವನೆ ಕೇಳಿದರೆ ಶಾಕ್ ಆಗ್ತೀರಾ

ಬೆಂಗಳೂರು : ಸ್ಯಾಂಡಲ್ ವುಡ್ ನಟಿ ರಾಧಿಕಾ ಅವರು ತಮ್ಮ ಮುಂಬರುವ ‘ದಮಯಂತಿ’ ಚಿತ್ರಕ್ಕೆ ತೆಗೆದುಕೊಂಡ ...

news

ದಿಗಂತ್ ಹಾಗೂ ಐಂದ್ರಿತಾ ಮದುವೆಗೆ ಬರುವ ಅತಿಥಿಗಳಿಗೆ ಹಾಕಿದ ಕಂಡೀಷನ್ ಏನು?

ಬೆಂಗಳೂರು : ಸ್ಯಾಂಡಲ್‍ವುಡ್ ನ ಕ್ಯೂಟ್ ಜೋಡಿ ದಿಗಂತ್ ಹಾಗು ಐಂದ್ರಿತಾ ತಮ್ಮ ಮದುವೆಗೆ ಬರುವ ಅತಿಥಿಗಳಿಗೆ ...

news

ಪೇಟಾ ಸಂಸ್ಥೆಯ ಕೆಂಗಣ್ಣಿಗೆ ಗುರಿಯಾದ ಪ್ರಿಯಾಂಕ-ನಿಕ್

ಮುಂಬೈ : ಇತ್ತೀಚೆಗೆ ಮದುವೆಯಾದ ಬಾಲಿವುಡ್ ನಟಿ ಪ್ರಿಯಾಂಕ ಚೋಪ್ರಾ ಹಾಗೂ ಗಾಯಕ ನಿಖ್ ಇದೀಗ ಪ್ರಾಣಿ ದಯಾ ...

news

ಮಗಳಿಗೆ ನಾಮಕರಣ ಶಾಸ್ತ್ರ ಮಾಡಿಸಿದ ನಟ ಅಜಯ್ ರಾವ್; ಮಗುವಿನ ಹೆಸರೇನು ಗೊತ್ತಾ?

ಬೆಂಗಳೂರು : ಇತ್ತೀಚೆಗೆ ಹೆಣ್ಣು ಮಗುವಿಗೆ ತಂದೆಯಾಗಿದ ಸ್ಯಾಂಡಲ್ ವುಡ್ ನಟ ಅಜಯ್ ರಾವ್ ಅವರು ಇದೀಗ ತಮ್ಮ ...