ಪ್ರದಾನ ಸಮಾರಂಭದಲ್ಲಿ ಬಾಲಿವುಡ್ ಕಂಗನಾ ರಣಾವತ್ 4ನೇ ಬಾರಿಗೆ ಅತ್ಯುತ್ತಮ ನಟಿ ಪ್ರಶಸ್ತಿ ಪಡೆದಿದ್ದಾರೆ. ಈ ವರ್ಷ ಗೆದ್ದವರಿಗೆ ಉಪರಾಷ್ಟ್ರಪತಿ ಎಂ ವೆಂಕಯ್ಯ ನಾಯ್ಡು ಪ್ರಶಸ್ತಿಗಳನ್ನು ನೀಡಿದ್ದು, ಪ್ರಶಸ್ತಿ ಪುರಸ್ಕೃತರಲ್ಲಿ ಕಂಗನಾ ರಣಾವತ್ ಮತ್ತು ಮನೋಜ್ ಬಾಜಪೇಯಿ ಸೇರಿದ್ದಾರೆ. ಮಣಿಕರ್ಣಿಕಾ: ಕ್ವೀನ್ ಆಫ್ ಝಾನ್ಸಿ ಮತ್ತು ಪಂಗಾ ಸಿನಿಮಾದ ಅಭಿನಯಕ್ಕಾಗಿ ಕಂಗನಾಗೆ ಅತ್ಯುತ್ತಮ ನಟಿ ಪ್ರಶಸ್ತಿ ನೀಡಲಾಯಿತು. ಸಾಂಪ್ರದಾಯಿಕ ಸೀರೆಯನ್ನು ಧರಿಸಿದ ನಟಿ ವೇದಿಕೆಯ ಮೇಲೆ ನಡೆದು ಪ್ರಶಸ್ತಿ ಸ್ವೀಕರಿಸಿದ್ರು.