ಹೈದರಾಬಾದ್ : ಹಲವು ನಟರು, ನಿರ್ದೇಶಕರು ಹಾಗೂ ನಿರ್ಮಾಪಕರ ಮೇಲೆ ಆರೋಪ ಮಾಡುತ್ತಿರುವ ಟಾಲಿವುಡ್ ನಟಿ ಶ್ರೀರೆಡ್ಡಿ ಅವರ ಮೇಲೆ ಕಾಲಿವುಡ್ ನಟ ಕಾರ್ತಿ ಅವರು ಕಿಡಿಕಾರಿದ್ದಾರೆ. ಹೌದು. ಕಾಸ್ಟಿಂಗ್ ಕೌಚ್ ವಿರೋಧಿಸಿ ಅರೆಬೆತ್ತಲೆ ಪ್ರತಿಭಟನೆ ಮಾಡುವುದರ ಮೂಲಕ ಸುದ್ದಿಯಾಗಿರುವ ನಟಿ ಶ್ರೀರೆಡ್ಡಿ ಅವರು ಅಂದಿನಿಂದ ಹಲವು ನಟರು, ನಿರ್ದೇಶಕರು ಹಾಗೂ ನಿರ್ಮಾಪಕ ಮೇಲೆ ನಾನಾ ತರಹದ ಆರೋಪಗಳನ್ನು ಮಾಡಿದ್ದಾರೆ. ಇದಕ್ಕೆ ಕೆಲವರು ಪ್ರಚಾರಕ್ಕಾಗಿ ಶ್ರೀರೆಡ್ಡಿ ಈ ರೀತಿ ಮಾಡುತ್ತಿದ್ದಾರೆ