ಲಾಸ್ ಏಂಜಲೀಸ್: 2018 ನೇ ಸಾಲಿನ ಆಸ್ಕರ್ ಪ್ರಶಸ್ತಿ ಪ್ರದಾನ ಕಾರ್ಯಕ್ರಮದಲ್ಲಿ ಬಾಲಿವುಡ್ ಬ್ಯೂಟಿ ಪ್ರಿಯಾಂಕಾ ಚೋಪ್ರಾ ಭಾಗವಹಿಸಿಲ್ಲ. ಈ ಬಗ್ಗೆ ಅಭಿಮಾನಿಗಳಿಗೆ ತುಂಬಾ ಬೇಸರವಾಗಿದೆ.2016 ಹಾಗೂ 2017 ರ ಆಸ್ಕರ್ ಪ್ರಶಸ್ತಿ ಸಮಾರಂಭದಲ್ಲಿ ರೆಡ್ ಕಾರ್ಪೆಟ್ ಮೇಲೆ ವಾಕ್ ಮಾಡಿ ಎಲ್ಲರನ್ನೂ ಬೆರಗುಗೊಳಿಸಿದ್ದ ಪಿಗ್ಗಿ, ಈ ಸಾರಿ ಗೈರಾಗಿರುವುದು ಸಾಕಷ್ಟು ಜನರಲ್ಲಿ ಅಸಮಾಧಾನವನ್ನುಂಟು ಮಾಡಿತ್ತು. ಈ ಬಾರಿಯ ಆಸ್ಕರ್ ಅವಾರ್ಡ್ ಫಂಕ್ಷನ್ನಿಂದ ಪ್ರಿಯಾಂಕಾ ದೂರ ಉಳಿದಿರುವುದಕ್ಕೆ ಕಾರಣ ಸಿಕ್ಕಿದೆ.