Widgets Magazine

ಬಾಲಿವುಡ್ ನಟಿ ರಾಣಿ ಮುಖರ್ಜಿ ಅವರು ತಮ್ಮ ಪತಿಗೆ ಪ್ರತಿದಿನ ಬೈಯುವುದು ಯಾಕೆ ಗೊತ್ತಾ?

ಮುಂಬೈ| pavithra| Last Modified ಬುಧವಾರ, 21 ಫೆಬ್ರವರಿ 2018 (06:15 IST)
ಮುಂಬೈ : ‘ಹಿಚ್ಕಿ’ ಸಿನಿಮಾದ ಮೂಲಕ ಚಿತ್ರ ರಂಗಕ್ಕೆ ಮರಳಿ ಬಂದ ಬಾಲಿವುಡ್ ನಟಿ ರಾಣಿ ಮುಖರ್ಜಿ ಅವರು ತಮ್ಮ ಖಾಸಗಿ ಜೀವನಕ್ಕೆ ಸಂಬಂಧಪಟ್ಟ ವಿಷಯವೊಂದನ್ನು ಬಹಿರಂಗಪಡಿಸಿಸ್ದಾರೆ.


ಇತ್ತಿಚೆಗೆ ಸಿನಿಮಾದ ಪ್ರಮೋಶನ್ ಗಾಗಿ ನೇಹಾ ಧುಪಿಯಾ ಚಾಟ್ ಶೋನಲ್ಲಿ ಭಾಗಿಯಾಗಿದ್ದ ರಾಣಿ ಮುಖರ್ಜಿ ಅವರಿಗೆ ನಿರೂಪಕಿ ನೇಹಾ ಧುಪಿಯಾ ಅವರು ನೀವು ನಿಮ್ಮ ಪತಿಗೆ ಬೈಯುತ್ತೀರಾ ಎಂದು ಪ್ರಶ್ನಿಸಿದಾಗ ಅದಕ್ಕೆ ಅವರು ಹೌದು, ನನ್ನ ಪತಿಗೆ ನಾನು ಪ್ರತಿದಿನ ಬೈಯುತ್ತೇನೆ ಮತ್ತು ಶಾಪವನ್ನು ಹಾಕುತ್ತೇನೆ. ಆದ್ರೆ ಇದೆಲ್ಲವನ್ನೂ ಪ್ರೀತಿಯಿಂದ ಮಾಡುತ್ತೇನೆ, ವಿನಃ ಕೋಪದಿಂದಲ್ಲ. ನಾನು ಯಾರನ್ನು ಹೆಚ್ಚಾಗಿ ಪ್ರೀತಿಸುತ್ತೇನೋ ಅವರನ್ನು ನಾನು ಯಾವಾಗಲೂ ಬೈಯುತ್ತಿರುತ್ತೇನೆ. ನನಗೆ ಇಷ್ಟವಾದವರೊಂದಿಗೆ ಯಾವಾಗಲೂ ನಾನು ತರ್ಲೆ ಮಾಡುತ್ತಾ ಇರುತ್ತೇನೆ ಎಂದು ಉತ್ತರಿಸಿದ್ದಾರೆ.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ
ಮೊಬೈಲ್ ಆ್ಯಪ್


ಇದರಲ್ಲಿ ಇನ್ನಷ್ಟು ಓದಿ :