ಮುಂಬೈ : ಬಾಲಿವುಡ್ ನ ಖ್ಯಾತ ನಟ ಧರ್ಮೇಂದ್ರ ಅವರ ಮನೆಗೆ ಸಲ್ಮಾನ್ ಖಾನ್ ಅವರು ಭೇಟಿ ನೀಡಿ ಅವರ ಯೋಗಕ್ಷೇಮ ವಿಚಾರಿಸಿದ್ದಾರೆ. ಧರ್ಮೇಂದ್ರ ಅವರಿಗೆ ಈಗ 82 ವರ್ಷ ವಯಸ್ಸಾಗಿದ್ದು, ಆಗಾಗ ಅವರ ಆರೋಗ್ಯ ಕೆಡುತ್ತಿತ್ತು. ಅದಕ್ಕಾಗಿ ಸಲ್ಮಾನ್ ಖಾನ್ ಅವರು ಅವರ ಮನೆಗೆ ಅಚ್ಚರಿಯ ಭೇಟಿ ನೀಡಿ ಅವರ ಕುಶಲಕ್ಷೇಮ ವಿಚಾರಿಸಿದರು. ಸಲ್ಮಾನ್ ಖಾನ್ ಅವರು ಧಿಡೀರನೆ ಮನೆಗೆ ಆಗಮಿಸಿದ್ದನ್ನು ಕಂಡು ಧರ್ಮೇಂದ್ರ ಅವರು ತುಂಬಾ ಸಂತೋಷಪಟ್ಟರು.