ಕತ್ರೀನಾ ಜೊತೆ ವ್ಯಾಯಾಮ ಮಾಡುವುದು 'ಆರೋಗ್ಯಕ್ಕೆ ಹಾನಿಕಾರಕ' ಎಂದು ಸೋನಾಕ್ಷಿ ಸಿನ್ಹಾ ಹೇಳಿದ್ಯಾಕೆ?

ಮುಂಬೈ, ಸೋಮವಾರ, 9 ಜುಲೈ 2018 (19:25 IST)

ಮುಂಬೈ : ಕಠಿಣ ವರ್ಕೌಟ್ ಮೂಲಕ ​ಫಿಟ್​ನೆಸ್​ ಕಾಪಾಡಿಕೊಳ್ಳುವ ಬಾಲಿವುಡ್ ನಟಿ ಕತ್ರೀನಾ ಕೈಫ್ ವರ್ಕೌಟ್ ನೋಡಿ ಇದೀಗ ಬಾಲಿವುಡ್ ದಬಂಗ್' ಬೆಡಗಿ ಸೋನಾಕ್ಷಿ ಸಿನ್ಹಾ ಹೆದರಿದ್ದಾರಂತೆ.


ಸಲ್ಮಾನ್ ಖಾನ್ ನಡೆಸಿಕೊಡುತ್ತಿರುವ ದಬಂಗ್ ಟೂರ್ ಕಾರ್ಯಕ್ರಮದಲ್ಲಿ ಕತ್ರೀನಾ ಕೈಫ್ ಮತ್ತು ಸೋನಾಕ್ಷಿ ಸಿನ್ಹಾ ಭಾಗವಹಿಸಿದ್ದು, ಈ ವೇಳೆ ಇಬ್ಬರು ಜೊತೆಯಾಗಿ ಕೈಗಳನ್ನು ಹಿಡಿದು ಝೀರೊ ಸೈಜ್​ಗಾಗಿ ವರ್ಕೌಟ್ ಮಾಡಿದ್ದು, ಆ ವಿಡಿಯೋವನ್ನು ಸೋನಾಕ್ಷಿ ಸಿನ್ಹಾ ಸಾಮಾಜಿಕ ತಾಣದಲ್ಲಿ ಹಂಚಿಕೊಂಡಿದ್ದಾರೆ.


ಈ ವಿಡಿಯೋಗೆ ಕತ್ರೀನಾ ಕೈಫ್ ಜೊತೆ ವ್ಯಾಯಾಮ ಮಾಡುವುದು 'ಆರೋಗ್ಯಕ್ಕೆ ಹಾನಿಕಾರಕ' ಎಂದು ಸೋನಾಕ್ಷಿ ಸಿನ್ಹಾ ಶೀರ್ಷಿಕೆ ನೀಡಿದ್ದಾರೆ. ಹೌದು, ಕತ್ರೀನಾ ರೀತಿಯಲ್ಲಿ ವರ್ಕೌಟ್ ಮಾಡಲು ಸಾಧ್ಯವಿಲ್ಲ ಎಂದು ತಿಳಿಸಿರುವ ಸೋನಾಕ್ಷಿ ಸಿನ್ಹಾ ಜಿಮ್​ನಲ್ಲಿ ಕತ್ರೀನಾ ಕೈಫ್ ಕಸರತ್ತನ್ನು ಮೆಚ್ಚಲೇಬೇಕು ಅಂದಿದ್ದಾರೆ. ಬಿಟೌನ್​ನಲ್ಲಿ 'ತಪ್ಪಡ್​ ಸೆ ನಹಿ ಡರ್ತಾ ಸಾಬ್'​ ಎಂದು ಕೆರಿಯರ್​ ಆರಂಭಿಸಿದ್ದ 'ದಬಂಗ್' ಸುಂದರಿ ಕತ್ರೀನಾಳ ಕಸರತ್ತಿಗೆ ಹೆದರಿದ್ದಾರೆ.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿಇದರಲ್ಲಿ ಇನ್ನಷ್ಟು ಓದಿ :  

ಸ್ಯಾಂಡಲ್ ವುಡ್

news

ಜಾಹ್ನವಿ ಕಪೂರ್ ಸಿಮಾರಂಗಕ್ಕೆ ಬರುವುದು ಇವರಿಗೆ ಇಷ್ಟವಿರಲಿಲ್ಲವಂತೆ

ಮುಂಬೈ : ದಿ. ನಟಿ ಶ್ರೀದೇವಿ ಪುತ್ರಿ ಜಾಹ್ನವಿ ಕಪೂರ್ ಅವರು ಧಡಕ್ ಚಿತ್ರದ ಮೂಲಕ ಬಾಲಿವುಡ್ ಪದಾರ್ಪಣೆ ...

news

ವಿಜಯ್ ಅಭಿನಯದ ‘ಸರ್ಕಾರ್’ ಚಿತ್ರಕ್ಕೆ ಎದುರಾಗಿದೆ ಸಂಕಷ್ಟ

ಚೆನ್ನೈ : ತಮಿಳು ನಟ ವಿಜಯ್ ಅಭಿನಯದ ‘ಸರ್ಕಾರ್’ ಚಿತ್ರದ ಪೋಸ್ಟರ್ ವಿರುದ್ಧ ತಮಿಳುನಾಡು ಆರೋಗ್ಯ ಇಲಾಖೆ ...

news

ಈ ದಿನ ನಟ ಸುದೀಪ್ ಜೀವನದಲ್ಲಿ ಮರೆಯಲಾಗದ ದಿನವಂತೆ. ಯಾಕೆ ಗೊತ್ತಾ?

ಬೆಂಗಳೂರು : ಸ್ಯಾಂಡಲ್ ವುಡ್ ನಟ ಕಿಚ್ಚ ಸುದೀಪ್ ಅವರು ಜುಲೈ 6 ತಮ್ಮ ಜೀವನದಲ್ಲಿ ಮರೆಯಲಾಗದ ದಿನವಾಗಿದೆ ...

news

ಬಾಲಿವುಡ್ ಸಿನಿಮಾರಂಗದ ವಿರುದ್ಧ ಸಿ.ಟಿ. ರವಿ ಕಿಡಿಕಾರಿದ್ಯಾಕೆ ಗೊತ್ತೇ…?

ಬೆಂಗಳೂರು : ಬಾಲಿವುಡ್ ಸಿನಿಮಾರಂಗದ ವಿರುದ್ಧ ಬಿಜೆಪಿ ಮುಖಂಡ ಸಿ.ಟಿ. ರವಿ ಅವರು ಟ್ವಿಟ್ಟರ್ ನಲ್ಲಿ ...