ಮುಂಬೈ : ಉತ್ತಮ ನಟಿ ಎಂದು ಹೆಸರು ಮಾಡಿರುವ ಬಾಲಿವುಡ್ ನಟಿ ವಿದ್ಯಾಬಾಲನ್ ಅವರು ಹಲವು ಪ್ರಶಸ್ತಿಗಳನ್ನು ಕೂಡ ಪಡೆದುಕೊಂಡಿದ್ದಾರೆ. ಇಂತಹ ನಟಿ ರೀಲ್ ಲೈಫ್ ನಲ್ಲಿ ಮಾತ್ರವಲ್ಲ ರಿಯಲ್ ಲೈಫ್ ನಲ್ಲಿಯೂ ಕೂಡ ಒಬ್ಬ ಗರ್ಭಿಣಿಯಂತೆ ನಟಿಸಿದ್ದಾರಂತೆ. ಹೌದು ನಟಿ ವಿದ್ಯಾಬಾಲನ್ ಅವರು ರೈಲಿನಲ್ಲಿ ಸೀಟ್ ಪಡೆಯಲು ಗರ್ಭಿಣಿಯಂತೆ ನಟಿಸುತ್ತಿದ್ದಾರಂತೆ. ಈ ಬಗ್ಗೆ ಸ್ವತಃ ವಿದ್ಯಾಬಾಲನ್ ಅವರೇ ಇತ್ತೀಚೆಗಷ್ಟೇ ನಡೆದ ಸಂದರ್ಶನವೊಂದರಲ್ಲಿ ಹೇಳಿದ್ದಾರೆ. ನಾನು ಯುವತಿಯಾಗಿದ್ದಾಗ ರೈಲಿನಲ್ಲಿ ಪ್ರಯಾಣಿಸುತ್ತಿದ್ದೆ.