ಜೋಧ್ಪುರ : ಬಾಲಿವುಡ್ ನಟ ಸಲ್ಮಾನ್ ಖಾನ್ ಅವರು ಕೃಷ್ಣಮೃಗಗಳ ಬೇಟೆ ಪ್ರಕರಣದಲ್ಲಿ ಜಾಮೀನನ ಮೇಲೆ ಹೊರಬಂದಿದ್ದು, ಈ ಪ್ರಕರಣಕ್ಕೆ ಸಂಬಂಧಿಸಿದಂತೆ ವಿಧಿಸಿದ ಜೈಲು ಶಿಕ್ಷೆಯನ್ನು ರದ್ದುಪಡಿಸಬೇಕು ಎಂಬ ಅರ್ಜಿಯ ವಿಚಾರಣೆಯನ್ನು ಸೋಮವಾರ(ಇಂದು) ಜೋಧ್ಪುರ ನ್ಯಾಯಾಲಯ ನಡೆಯಲಿದೆ. ಕೃಷ್ಣಮೃಗಗಳನ್ನು ಹತ್ಯೆ ಮಾಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ನಟ ಸಲ್ಮಾನ್ಖಾನ್ ದೋಷಿ ಎಂದು ಘೋಷಿಸಿದ್ದ ಕೋರ್ಟ್, ಐದು ಜೈಲು ಶಿಕ್ಷೆ ವಿಧಿಸಿ ತೀರ್ಪು ನೀಡಿತ್ತು. ಎರಡು ದಿನಗಳ ಸೆರೆವಾಸ ಅನುಭವಿಸಿದ್ದ ಸಲ್ಮಾನ್ ,ಬಳಿಕ